ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಮಲ್ಪೆಯ ಸಿಂಡಿಕೇಟ್ ಬ್ಯಾಂಕಿನಲ್ಲಿ ಕಡಿಮೆ ಶ್ಯೂರಿಟಿಗೆ 193 ಕೋಟಿ ರೂಪಾಯಿಗಳ ಸಾಲ ಪಡೆದು ವಂಚನೆ ಮಾಡಿದ್ದಾರೆ ಅನ್ನೋ ದೂರನ್ನ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಕೇಂದ್ರ ಹಣಕಾಸು ಇಲಾಖೆಗೆ ನೀಡಿದ್ದರು .ಈ ಹಿನ್ನಲೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಈ ಬಗ್ಗೆ ಸ್ಪಷ್ಟೀಕರಣವನ್ನು ಕೂಡ ನೀಡಿದ್ದರು. ನಾನು ನಗ್ತಾ ಇದ್ದೇನೆ, ನಾನು ಯಾವುದೇ ಬ್ಯಾಂಕಿಗೆ ವಂಚನೆ ಮಾಡಿಲ್ಲ, ಯಾರು ಬೇಕಾದ್ರೂ ಬ್ಯಾಂಕಿಗೆ ತೆರಳಿ ದಾಖಲೆ ಪರಿಶೀಲಸಬಹುದು ಎಂದು ಹೇಳಿಕೆಯನ್ನ ಕೊಟ್ಟಿದ್ದರು. ಇದರ ಬೆನ್ನಲ್ಲೇ ಸಿಂಡಿಕೇಟ್ ಬ್ಯಾಂಕ್ ಕೂಡ ಯಾವುದೇ ಅವ್ಯವಾಹಾರ ನಡೆದಿಲ್ಲ ಎಂದು ಸ್ಪಷ್ಟೀಕರಣವನ್ನ ಕೊಟ್ಟಿತ್ತು. ಹೀಗಾಗಿ ದೂರು ನೀಡಿದ್ದ ಟಿ.ಜೆ ಅಬ್ರಾಹಂ ಇಂದು ಸಿಂಡಿಕೇಟ್ ಬ್ಯಾಂಕಿನ ಮುಖ್ಯ ಕಚೇರಿಗೆ ಭೇಟಿ ನೀಡಿ ,ದಾಖಲೆಗಳನ್ನ ನೀಡಲು ಮನವಿ ಮಾಡಿದ್ರು ಆದ್ರೆ ಬ್ಯಾಂಕ್ ಅಧಿಕಾರಿಗಳು ಮಾತ್ರ ಅರ್ ಟಿ ಐ ಮೂಲಕ ದಾಖಲೆಗಳನ್ನ ನೀಡ್ತೇವೆ ಅಂತಾ ಉತ್ತರಿಸಿದೆ.
ಈ ವೇಳೆ ಬ್ಯಾಂಕಿನ ಮೇಲೆ ಕಿಡಿಕಾರಿದ ಅಬ್ರಾಹಂ ಬ್ಯಾಂಕ್ ಅಧಿಕಾರಿಗಳು, ಸಚಿವ ಪ್ರಮೋದ್ ಮಧ್ವರಾಜ್ ಗೆ ಪರವಾಗಿ ನಿಂತಿದೆ.ಪ್ರಮೋದ್ ಮಧ್ವರಾಜ್ ನಗ್ತಾ ಹೇಳ್ತಾರೆ ಯಾರು ಬೇಕಾದ್ರು ದಾಖಲೆ ಪರಿಶೀಲಿಸಬಹುದು ಎಂದು ,ಅದ್ರೆ ಇಲ್ಲಿ ದಾಖಲೆ ಆರ್.ಟಿ.ಐ ನಲ್ಲಿ ಪಡಕೊಳ್ಳಿ ಅಂತಿದ್ದಾರೆ.ಸಿಂಡಿಕೇಟ್ ಬ್ಯಾಂಕ್ ಜನರಿಗೆ ಸುಳ್ಳು ಮಾಹಿತಿಯನ್ನ ನೀಡ್ತಾ ಇದೆ.ಬ್ಯಾಂಕ್ ಮೇಲೆ ಐದು ಕೋಟಿ ರೂಪಾಯಿಗಳ ಮಾನ ನಷ್ಟ ಮೊಕದ್ದಮೆ ಹಾಕುತ್ತೇನೆಂದು ಆಕ್ರೋಷ ವ್ಯಕ್ತ ಪಡಿಸಿದರು.
ಇದೇ ವೇಳೆ ಸಚಿವ ಪ್ರಮೋದ್ ರನ್ನ ದಾವುದ್ ಗೆ ಹೋಲಿಸಿದ ಅಬ್ರಾಹಂ ,ದಾವೂದ್ ಕೂಡ ನಗುತ್ತಾ ಇರ್ತಾನೆ. ಅಳುವುದನ್ನ ನಾನು ಯಾವತ್ತು ನೋಡಿಲ್ಲ.ಪ್ರಮೋದ್ ಮಧ್ವರಾಜ್ ಕೂಡ ದಾವುದ್ ತರನೇ ನಾಗ್ತಾನೆ ಅಂತಾ ಹೇಳಿದ್ರು.
ಪ್ರಮೋದ್ ತಾಕತ್ತಿದ್ದಿದ್ರೆ ದಾಖಲೆ ಸಹಿತ ಸ್ಪಷ್ಟೀಕರಣ ಕೊಡಬೇಕಿತ್ತು.ಬ್ಯಾಂಕಿನವರು ಅವರಂತೆ ಸ್ಪಷ್ಟೀಕರಣವನ್ನ ಕೊಡ್ತಾರೆ . ಬ್ಯಾಂಕ್ ಯಾವ ಅಧಾರದಲ್ಲಿ ಸ್ಪಷ್ಟೀಕರಣವನ್ನು ಕೊಡುತ್ತಿದೆ ಅನ್ನೋದು ನಂಗೆ ಗೊತ್ತಾಗ್ತಿಲ್ಲ ಅಂದ್ರು. 18 ಗುಂಟ ಕೃಷಿ ಭೂಮಿಗೆ ಮೂವತ್ತು ನಾಲ್ಕುವರೆ ಕೋಟಿ ರೂಪಾಯಿ ಸಾಲವನ್ನ ಎರಡು ಬಾರಿ ಪಡಕೊಂಡಿದ್ದಾರೆ. ಈ ಬಗ್ಗೆ ಎಲ್ಲಾ ದಾಖಲೆಗಳನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇನೆ ಎಂದಿದ್ದಾರೆ.
Comments are closed.