ಕರಾವಳಿ

‘ಆಸ್ಕರ್ ಫೆರ್ನಾಂಡಿಸ್ 15 ವರ್ಷದಿಂದ ಸಂಬಳವೇ ಕೊಟ್ಟಿಲ್ಲ’: ವ್ಯಕ್ತಿಯಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ!

Pinterest LinkedIn Tumblr

ಉಡುಪಿ: ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡೀಸ್ ಜೊತೆ ಕೆಲಸ ಮಾಡಿಕೊಂಡಿದ್ದ ಗೋಪಾಲ ಪೂಜಾರಿ ಎನ್ನೋ ವ್ಯಕ್ತಿಗೆ ಕಳೆದ 15 ವರುಷಗಳಿಂದ ಆಸ್ಕರ್ ನಯಾ ಪೈಸಾ ಸಂಬಳವನ್ನೇ ನೀಡದೇ ವಂಚಿಸಿದ್ದಾರೆ ಅಂತಾ ಖುದ್ದು ಗೋಪಾಲ ಪೂಜಾರಿ ಆರೋಪಿಸಿದ್ದಾರೆ.

1972 ರಿಂದ ಅಸ್ಕರ್1987 ರವರೆಗೆ ಅವರ ಆಸ್ಕರ್ ನಡೆಸುತ್ತಿದ್ದ ವರ್ಕ್ ಶಾಪ್ ಹಾಗೂ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದೆ ,ಈವರೆಗೆ ನನಗೆ ಆಸ್ಕರ್ ಸುಮಾರು 6.07 ಲಕ್ಷದವರೆಗೆ ನನಗೆ ಬಾಕಿ ಇಟ್ಟಿದ್ದಾರೆ. ನಾನು ದುಡಿದ ಹಣವನ್ನು ಆಸ್ಕರ್ ನೀಡದೇ ಇರುವುದರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಎಪ್ರಿಲ್ 2 ರಂದು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಗೋಪಾಲ್ ಪೂಜಾರಿ ಹೇಳಿದ್ದಾರೆ.

ಆಸ್ಕರ್ ಬಳಿ ಹಲವು ಬಾರಿ ಬಾಕಿ ಹಣ ನೀಡುವಂತೆ ಅಂಗಲಾಚಿದ್ದೇನೆ .ಅದ್ರೆ ಆಸ್ಕರ್ ನಾಳೆ ಕೊಡ್ತೇನೆ ನಾಡಿದ್ದು ಕೊಡ್ತೇನೆ ಅಂತಾ ನನಗೆ ವಂಚನೆ ಮಾಡಿದ್ದಾರೆ. ಸಂಬಳ ನೀಡದ ಬಗ್ಗೆ ಕಾರ್ಮಿಕ ಇಲಾಖೆಗೂ ದೂರು ಕೊಟ್ಟಿದ್ದು,ಕಾರ್ಮಿಕ ಇಲಾಖೆ ಆಸ್ಕರ್ ಅವರಿಗೆ ಎರಡು ಬಾರಿ ನೋಟಿಸನ್ನು ಕೂಡ ಕೊಟ್ಟಿದ್ದಾರೆ. ಆದ್ರೆ ಈವರೆಗೂ ಆಸ್ಕರ್ ಇದಕ್ಕೆ ಪ್ರತಿಕ್ರಿಯೆ ನೀಡದ ಕಾರಣ ಅನಿವಾರ್ಯವಾಗಿ ಉಪವಾಸ ಸತ್ಯಾಗ್ರಹದ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದಿದ್ದಾರೆ. ಈ ಬಗ್ಗೆ 1995 ರಲ್ಲಿ ಸೋನಿಯಾ ಗಾಂಧಿ ಬಳಿ ಈ ಬಗ್ಗೆ ಹೇಳಿಕೊಂಡಾಗ ,ಸಂಬಳವನ್ನು ಬಾಕಿ ಇಡದೇ ಅವರ ಜೀವನಕ್ಕೊಂದು ದಾರಿ ಮಾಡಿಕೊಡಿ ಎಂದಿದ್ದರು ,ಅದರಂತೆ ಕೇವಲ ಹತ್ತು ಸಾವಿರ ಕೊಟ್ಟು ಕೈ ತೊಳಕೊಂಡಿದ್ರು ಎಂದು ಆರೋಪಿಸಿದ್ದಾರೆ.

ಅಸ್ಕರ್ ರಾಜಕೀಯ ಜೀವನದ ಪ್ರಾರಂಭದಿಂದಲೂ ನಾನು ಜೊತೆಗಿದ್ದವ ,ನಾನು ಮಾಡಿದ ಉಪಕಾರಕ್ಕೆ ಇಂದಲ್ಲ ನಾಳೆ ಪಕ್ಷದಲ್ಲಿ ಯಾವುದಾದ್ರೂ ಹುದ್ದೆ ಕೊಡಬಹುದೆಂದು ನಿರೀಕ್ಷೆಯಲ್ಲಿ ಇದ್ದಿದ್ದೆ. ಆದ್ರೆ ಆಸ್ಕರ್ ತನ್ನ ಲಾಭವನ್ನು ಮಾತ್ರ ನೋಡಿಕೊಂಡಿದ್ದಾರೆ ಜೊತೆಗಿದ್ದವರನ್ನ ಮರೆತು ಬಿಟ್ಟು ದ್ರೋಹ ಮಾಡಿದ್ದಾರೆ. ನಮ್ಮ ಕಷ್ಟ ಕಾಲದಲ್ಲೂ ನಮ್ಮನ್ನು ತಿರುಗಿಯೂ ಸಹ ನೋಡಿಲ್ಲ ಎಂದು ಗೋಪಾಲ ಪೂಜಾರಿ ಅಳಲನ್ನು ತೋಡಿಕೊಂಡಿದ್ದಾರೆ.

Comments are closed.