ಉಡುಪಿ: ಮನೆಯವರೆಲ್ಲಾ ಇದ್ದರೂ ಕೂಡ ಆಕೆ ಒಬ್ಬ ಅನಾಥೆ, ಆದ್ರೆ ತಾನು ಸಾಯುವಾಗ ಅನಾಥೆಯಾಗಿ ಸಾಯಬಾರದೆಂಬ ಆಸೆ ಆಕೆಯಲ್ಲಿತ್ತು. ಹೀಗಾಗಿ ಸಮಾಜ ಸೇವಕರೊಬ್ಬರಲ್ಲಿ , ನೀನೆ ನನ್ನ ಮಗನಾಗಿ ನಿಂತು ನನ್ನ ಶವ ಸಂಸ್ಕಾರ ಮಾಡಬೇಕೆಂಬ ಆಸೆಯನ್ನ ಮುಂದಿಟ್ಟಿದ್ರು .ಇದೀಗ ಆ ವೃದ್ದೆ ಇಹಾ ಲೋಕ ತ್ಯಜಿಸಿದ್ದಾಳೆ.ಮಗನಾಗಿ ಬಂಧುಗಳಾಗಿ ನಿಂತ ಸಮಾಜ ಸೇವಕರು ಶವ ಸಂಸ್ಕಾರವನ್ನು ನಡೆಸಿದ್ದಾರೆ.
ಹಣೆಗೊಂದು ಕುಂಕುಮ ,ಹೊಸ ಸೀರೆ ತೊಡಿಸಿ , ಮೈ ತುಂಬು ಹೂವು ಗಳಿಂದ ಸಿಂಗರಿಸಿ ವಾದ್ಯ ಮೇಳಗಳ ಜೊತೆ ಶವ ಸಂಸ್ಕಾರದ ಮೆರವಣಿಗೆ ಹೋಗ್ತಾ ಇರೋವ ದೃಶ್ಯ ಒಬ್ಬ ಅನಾಥೆ ವೃದ್ದೆಯದ್ದು , ವೃದ್ದೆ ತನ್ನ ಕೊನೆ ಗಳಿಗೆಯಲ್ಲಿ ಆಸೆ ಪಟ್ಟಂತೆ, ಉಡುಪಿಯ ಸಮಾಜ ಸೇವಕರು ಸೇರಿ ಆಕೆಯ ಶವ ಸಂಸ್ಕಾರವನ್ನು ಆಕೆ ಇಷ್ಟದಂತೆ ನೇರವೇರಿಸಿಕೊಟ್ಟಿದ್ದಾರೆ.
ಸುಮಾರು 75 ವರುಷದ ವೃದ್ದೆಯ ಹೆಸರು ಸುಂದರಿ ಶೆಟ್ಟಿಗಾರ್ತಿ. ಉಡುಪಿಯಲ್ಲಿ ತನ್ನವರೆಲ್ಲೆರೂ ಇದ್ರೂ ಕೂಡ, ಅನಾಥವಾಗಿ ಕೃಷ್ಣ ಮಠದ ಸುತ್ತ ಪರಿಸರದಲ್ಲಿ ದಿಕ್ಕಿಲ್ಲದೇ ಅನಾಥೆಯಾಗಿ ತಿರುಗಾಡುತ್ತಿದ್ರು.ಪರಿಚಯಸ್ಥರು ಯಾರಾದ್ರೂ ಖರ್ಚಿ ಒಂದಷ್ಟು ಚಿಲ್ರೆ ಕಾಸು ,ಹೊಟ್ಟೆಗೇನಾದ್ರೂ ತಿನ್ನೋಕೆ ಕೊಟ್ರೆ ಅದರಿಂದಲೇ ಜೀವನ ಸಾಗಿಸ್ತಾ ಇದ್ರು.ಇಂತಹ ಸಂಧರ್ಭದಲ್ಲಿ ಆನಾರೋಗ್ಯ ಪಿಡೀತರಾಗಿ ಸರಕಾರಿ ಆಸ್ಪತ್ರೆ ಸೇರಿದ ವೃದ್ದೆಗೆ ಸಹಾಯಕ್ಕೆ ಬಂದವರು ಸಮಾಜ ಸೇವಕ ವಿಶು ಶೆಟ್ಟಿ .ಅವರನ್ನ ಅತೀಯಾಗಿ ಹಚ್ಚಿಕೊಂಡ ವೃದ್ದೆ, ತನ್ನ ಸಾವಿನ ಸಂಧರ್ಭದಲ್ಲಿ ಅನಾಥ ಶವನ್ನಾಗಿ ಮಾಡದೇ ಮಗನ ಸ್ಥಾನದಲ್ಲಿ ನಿಂತು ಶವ ಸಂಸ್ಕಾರ ಮಾಡುವಂತೆ ಕೇಳಿಕೊಂಡಿದ್ದರಂತೆ.
ಇತ್ತೀಚೆಗೆ ವೃದ್ದೆಯ ಆರೋಗ್ಯದಲ್ಲಿ ಏರುಪಾರಾಗಿ ಸುಂದರಿ ಶೆಟ್ಟಿಗಾರ್ತಿ ಸರಕಾರಿ ಆಸ್ಪತ್ರೆಯಲ್ಲಿ ಇಹಾ ಲೋಕ ತ್ಯಜಿಸಿದ್ದರು. ಈ ಸಂಧರ್ಭದಲ್ಲಿ ಸಮಾಜ ಸೇವಕರು ವೃದ್ದೆಯ ಕುಟುಂಬಸ್ಥರನ್ನು ಸಂಪರ್ಕಿಸಿ, ಅಂತ್ಯ ಸಂಸ್ಕಾರ ನಡೆಸುವಂತೆ ಮನವಿ ಮಾಡಿದ್ದಾರೆ. ಆದ್ರೆ ಕುಟುಂಬಸ್ಥರು ಮಾತ್ರ ತಮಗೂ ಅವರಿಗೂ ಸಂಭಂಧವೇ ಇಲ್ಲ ಅಂದು ಬಿಟ್ಟಿದ್ದಾರೆ. ನಾನೇ ಮುಂದೆ ನಿಂತು ಶವ ಸಂಸ್ಕಾರ ಮಾಡ್ತೇನೆ ಎಂದ ವಿಶು ಶೆಟ್ಟಿ ಅವರ ಮನವಿಗೆ ಮಾನವೀಯತೆಯಿಲ್ಲದ ಕುಟುಂಬಸ್ಥರು ಸರಕಾರಿ ಕಾಗದ ಪತ್ರಗಳಿಗೆ ಸಹಿ ಹಾಕಿ ಕೈ ಚೆಲ್ಲಿ ಬಿಟ್ರು.
ಕೊನೆಗೆ ವೃದ್ದೆಯ ಕೊನೆ ಆಸೆಯಂತೆ ವೃದ್ದೆಗೆ ಹೊಸ ಸೀರೆ ತೊಡಿಸಿ, ಹಣೆಗೆ ಕುಂಕುಮ ಹಚ್ಚಿ ಮೈ ತುಂಬಾ ಹೂವಿನಿಂದ ಸಿಂಗರಿಸಿ ಅಂಬುಲ್ಯಾನ್ಸ್ ನಲ್ಲಿ ನಗರದ ರುದ್ರ ಭೂಮಿಗೆ ಕರೆ ತಂದಿದ್ದಾರೆ . ಅಲ್ಲಿಂದ ವೃದ್ದೆ ಆಸೆ ಪಟ್ಟಂತೆ ವಾದ್ಯ ಮೇಳಗಳಿಂದ ಮೆರವಣಿಗೆ ನಡೆಸಿ ನಂತರ ಚಿತಗಾರದಲ್ಲಿಟ್ಟು ಸೇರಿದ್ದ ಸಮಾಜ ಸೇವಕರೇ ವೃದ್ದೆಯ ಬಂಧುಗಳಾಗಿ ಚಿತಕ್ಕೆ ಬೆಂಕಿ ಹಚ್ಚಿದ್ದ ಭಾವಪೂರ್ಣ ಕ್ಷಣ ಸೇರಿದ್ದ ಜನರ ಮನ ಕಲುಕಿತು.
ವೃದ್ದೆಯ ಅಸೆಯನ್ನ ನೇರವೇರಸಿದ ಸಮಾಜ ಸೇವಕರ ಕಾರ್ಯವನ್ನು ಜನ ಮುಕ್ತ ಕಂಟದಿಂದ ಶ್ಲಾಘಿಸಿದ್ದಾರೆ. ಎಲ್ಲರೂ ಇದ್ದೂ ಯಾರು ಇಲ್ಲದ ಅನಾಥೆಗೆ ಸಮಾಜವೇ ಬಂಧುಗಳಾಗಿ ನಿಂತಿರುವ ಈ ಒಂದು ಘಟನೆ, ಇನ್ನೂ ಮಾನವೀಯತೆ ಎಂಬುದು ಬದುಕಿದೆ ಎಂಬುವುದನ್ನ ಎತ್ತಿ ತೋರಿಸಿದಂತಿದೆ.
Comments are closed.