ಉಡುಪಿ: ರಸ್ತೆ ಪಕ್ಕ ತಳ್ಳುಗಾಡಿಯನ್ನಿಟ್ಟು ವ್ಯಾಪಾರ ಮಾಡುವ ವ್ಯಾಪಾರಿಗಳು ರಸ್ತೆಯಲ್ಲಿ ನಡೆದಾಡಿಕೊಂಡು ಹೋಗುವ ವಿಕಲಚೇತನ ವೃದ್ಧರೋರ್ವರಿಗೆ ಅಪಹಾಸ್ಯ ಮಾಡಿರುವ ಘಟನೆ ಉಡುಪಿ ನಗರದಲ್ಲಿ ನಡೆದಿದೆ.
ಜನರು ಓಡಾಡೋ ಸ್ಥಳದಲ್ಲಿ ತಳ್ಳಗಾಡಿಗಳನ್ನಿಟ್ಟು ವ್ಯಾಪಾರ ಮಾಡುವ ಇವರು ಅಂಗವಿಕಲರನ್ನು ತಮಾಷೆ ಮಾಡುತ್ತಾರೆ ಅಷ್ಟೇ ಅಲ್ಲ ಬಸ್ಸು ನಿಲ್ದಾಣಗಳಲ್ಲಿ ಓಡಾಡೋ ಯುವತಿಯರನ್ನು ಚುಡಾಯಿಸೋದು ಕೂಡ ಸಾಮಾನ್ಯವಾಗಿದೆ. ಹಲವು ಸಮಯಗಳಿಂದ ತಳ್ಳುಗಾಡಿ ವ್ಯಾಪಾರಸ್ಥರ ಅತೀರೇಕದ ವರ್ತನೆ ಸಾರ್ವಜನಿಕರ ಅಸಹನೆಗೆ ಕಾರಣವಾಗಿತ್ತು.
ಹೀಗಾಗಿ ತಳ್ಳುಗಾಡಿ ವ್ಯಾಪಾರಿಗಳ ದುರ್ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ತಳ್ಳುಗಾಡಿ ವ್ಯಾಪಾರಸ್ಥರಿಂದ ಅವಮಾನಕ್ಕೊಳಗಾದ ವೃದ್ಧರೋರ್ವರು ಸಾರ್ವಜನಿಕ ಸ್ಥಳದಲ್ಲೇ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ತಳ್ಳುಗಾಡಿ ವ್ಯಾಪಾರಸ್ಥರಿಗೆ ನಗರದೊಳಗೆ ಅವಕಾಶ ನೀಡಬಾರದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Comments are closed.