ಮುಂಬೈ: ದೇಶದಾದ್ಯಂತ ಕಾಸ್ಟಿಂಗ್ ಕೌಚ್ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಮತ್ತು ನಟಿ ಉಷಾ ಜಾಧವ್ ಬಾಲಿವುಡ್ನಲ್ಲಿ ತಮಗಾದ ಕರಾಳ ಅನುಭವದ ಕುರಿತು ಮಾತನಾಡಿದ್ದಾರೆ.
ಪ್ರಸ್ತುತ ದೇಶದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಕಾಸ್ಟಿಂಗ್ ಕೌಚ್ (ಸಿನಿಮಾ ಪಾತ್ರಕ್ಕಾಗಿ ಹಾಸಿಗೆ ಹಂಚಿಕೊಳ್ಳುವುದು) ವಿರುದ್ಧ ಹಲವು ನಟಿ ಮಣಿಯರು ಧನಿ ಎತ್ತುತ್ತಿದ್ದು, ಇದೇ ವಿಚಾರ ಸಂಬಂಧ ಖ್ಯಾತ ಬಿಬಿಸಿ ವಾಹಿನಿ ಸಾಕ್ಷ್ಯಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದೆ. ಬಾಲಿವುಡ್ ಕಾಮ ಪುರಾಣದ ಕುರಿತು ಬಿಬಿಸಿ ‘ಬಾಲಿವುಡ್ಸ್ ಡಾರ್ಕ್ ಸೀಕ್ರೆಟ್ಸ್’ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇದಕ್ಕಾಗಿ ಹಲವು ಖ್ಯಾತನಾಮ ನಟಿ ಮಣಿಯರ ಸಂದರ್ಶನ ಪಡೆಯುತ್ತಿದೆ.
ಇದೀಗ ಈ ಸಾಕ್ಷ್ಯಚಿತ್ರಕ್ಕಾಗಿ ಬಾಲಿವುಡ್ ಖ್ಯಾತ ನಟಿ ರಾಧಿಕಾ ಆಪ್ಟೆ ಮತ್ತು ನಟಿ ಉಷಾ ಜಾದವ್ ಸಂದರ್ಶನದಲ್ಲಿ ಪಾಲ್ಗೊಂಡು ಬಾಲಿವುಡ್ ನಲ್ಲಿ ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಸಾಕ್ಷ್ಯಚಿತ್ರದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ರಾಧಿಕಾ, ‘ಕೆಲವರು ತಮ್ಮನ್ನು ತಾವು ದೇವರು ಎಂದು ತಿಳಿದಿರುತ್ತಾರೆ. ಅವರು ಎಷ್ಟು ಪ್ರಭಾವ ಶಾಲಿಗಳಾಗಿರುತ್ತಾರೆಂದರೆ ಅವರ ವಿರುದ್ಧ ಮಾತನಾಡಿದರೆ ನಮ್ಮ ಕೆಲಸಕ್ಕೇ ಕುತ್ತು ಬರುತ್ತದೆ ಎಂದು ಸುಮ್ಮನಾಗುವವರ ಸಂಖ್ಯೆ ಹೆಚ್ಚಿದೆ. ಕಾಸ್ಟಿಂಗ್ ಕೌಚ್ ವಿರುದ್ಧ ಹೋರಾಡಲು ಎಲ್ಲರೂ ಒಂದಾಗಬೇಕು. ಎಲ್ಲರೂ ಒಟ್ಟಾಗಿ ಕಾಸ್ಟಿಂಗ್ ಕೌಚ್ ವಿರುದ್ಧ ಹೋರಾಡುವ ಮೂಲಕ ಈ ಭೂತ ಯಾರನ್ನೂ ಕಾಡಲು ಬಿಡಬಾರದು. ಈ ಬಗ್ಗೆ ಕಠಿಣ ತೀರ್ಮಾನ ತೆಗೆದುಕೊಳ್ಳಬೇಕು. ಈಗಾಗಲೇ ಈ ಸಂಬಂದ ಕ್ರಮಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಬ್ಬ ನಟಿ ಉಷಾ ಜಾಧವ್ ಮಾತನಾಡಿ, ಚಿತ್ರವೊಂದಕ್ಕೆ ಸಂಬಂಧಿಸಿದಂತೆ ಮಾತನಾಡಲು ಕರೆಸಿದ್ದ ಓರ್ವ ವ್ಯಕ್ತಿ, ನಿರ್ದೇಶಕರಿಗೆ ‘ಅದು ಬೇಕಂತೆ ಎಂದ.. ನನಗೆ ಅರ್ಥವಾಗದೇ ಹಣ ಇರಬೇಕು ಎಂದು ನನ್ನ ಬಳಿ ಹಣವಿಲ್ಲ ಎಂದಾಗ, ಆತ ಅದಲ್ಲ..ನಿರ್ಮಾಪಕರು ನಿನ್ನೊಂದಿಗೆ ಮಲಗಬೇಕು ಎಂದಿದ್ದಾರೆ ಎಂದ.. ಪಾತ್ರಕ್ಕಾಗಿ ನಿರ್ಮಾಪಕ ಅಥವಾ ನಿರ್ದೇಶಕನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಸಲಹೆ ನೀಡಿದ್ದ. ಅಲ್ಲದೆ ನಿರ್ಮಾಪಕ ಮತ್ತು ನಿರ್ದೇಶಕರೊಂದಿಗೆ ಸೆಕ್ಸ್ ನಡೆಸಲು ನಿನಗ ಖುಷಿಯಾಗಬೇಕು ಎಂದು ನನ್ನ ಮನವೊಲಿಸುವ ಪ್ರಯತ್ನ ಮಾಡಿದ್ದ ಎಂದು ಹೇಳಿದ್ದಾರೆ.
ಇದೇ ಸಾಕ್ಷ್ಯಚಿತ್ರದಲ್ಲಿ ಪಾಲ್ಗೊಂಡಿದ್ದ ಮತ್ತಿಬ್ಬರು ನಟಿಯರು ತಮ್ಮ ಅನುಭವದ ಬಗ್ಗೆ ಮಾತನಾಡಿದ್ದು, ‘ನೀನು ಚಿತ್ರರಂಗದಲ್ಲಿ ಇರಬೇಕು. ನಿನಗೆ ಚಿತ್ರಗಳಲ್ಲಿ ಅವಕಾಶ ಸಿಗಬೇಕು ಎಂದರೆ ಕಾಸ್ಟಿಂಗ್ ಕೌಚ್ಗೆ ಸಿದ್ಧವಿರಬೇಕು ಎಂದು ಬಾಲಿವುಡ್ನ ಓರ್ವ ವ್ಯಕ್ತಿ ತಿಳಿಸಿದ್ದ. ಅಲ್ಲದೆ ಆತ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅವನಿಗೆ ಯಾವಾಗಬೇಕೋ ಅವಾಗ ನನ್ನ ಬಳಿ ಬಂದು ಅನುಮತಿ ಇಲ್ಲದೇ ನನ್ನ ಮೈ ಮೇಲೆ ಕೈ ಹಾಕಿ ಮುತ್ತು ಕೊಡುತ್ತಿದ್ದ. ನನ್ನ ಬಟ್ಟೆಯೊಳಗೆ ಕೈ ಹಾಕುತ್ತಿದ್ದ. ಇದರಿಂದ ನನಗೆ ಆಘಾತವಾಗಿತ್ತು, ಕೂಡಲೇ ಆತನನ್ನು ದೂರತಳ್ಳಿದ್ದೆ ಎಂದು ಹೇಳಿದ್ದಾರೆ.
ಇನ್ನು ಬಿಬಿಸಿ ನಿರ್ಮಿಸುತ್ತಿರುವ ಈ ಸಾಕ್ಷ್ಯಚಿತ್ರದ ಮೇಲುಸ್ತುವಾರಿಯನ್ನು ಬಿಬಿಸಿ ಪತ್ರಕರ್ತೆ ರಜಿನಿ ವೈದ್ಯನಾಥನ್ ಅವರು ವಹಿಸಿದ್ದಾರೆ.
Comments are closed.