ಕರಾವಳಿ

ಅಂದು ಭಿಕ್ಷೆ ಬೇಡುತ್ತಿದ್ದ ಹುಡುಗಿ ಇಂದು ಪಿಯುಸಿಯಲ್ಲಿ ಡಿಸ್ಟಿಂಕ್ಷನ್..!

Pinterest LinkedIn Tumblr

ಕುಂದಾಪುರ: ರಸ್ತೆ ಬದಿಯಲ್ಲಿ ಭಿಕ್ಷೆ ಬೀಡಿ ಜೀವನ ನಡೆಸುತ್ತಿದ್ದ ಕಾವೇರಿ ಕಲಾವಿಭಾಗದಲ್ಲಿ ಒಟ್ಟು ೫೩೩ ಅಂಕಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣಳಾಗಿದ್ದಾಳೆ. ಕುಂದಾಪುರ ಬೇಳೂರು ಸ್ಪೂರ್ತಿಧಾಮದಲ್ಲಿ ಆಶ್ರಯ ಪಡೆದ ಕಾವೇರಿ ಕೆದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್‌ಎಲ್ಸಿ ಮಾಡಿದ್ದು, ನಂತರ ತೆಕ್ಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜ್ ಸೇರಿದ್ದಳು. ಪ್ರಥಮ ಪಿಯುಸಿಯಲ್ಲೂ ಉತ್ತಮ ಅಂಕ ಪಡೆದು ಉತ್ತೀಣಳಾದ ಕಾವೇರಿ ದ್ವಿತೀಯ ಪಿಯುಸಿಯಲ್ಲೂ ಉತ್ತಮ ಸ್ಕೋರ್ ಮಾಡುವ ಮೂಲಕ ಪಾಸಾಗಿದ್ದಾಳೆ.

ಕಾವೇರಿ ಕುಂದಾಪುದಲ್ಲಿ ಭಿಕ್ಷೆಬೇಡಿ ಜೀವನ ಸಾಗಿಸುತ್ತಿದ್ದಳು. ಕುಂದಾಪುರ ಸಹೃದಯಿ ಯುವಕರು ಕಾವೇರಿ ಬೆಳೂರು ಸ್ಪೂರ್ತಿಧಾಮಕ್ಕೆ ದಾಖಲಿಸಿದ್ದರು. ಸ್ಪೂರ್ತಿಧಾಮ ಸೇರಿದ ನಂತರ ಕಾವೇರಿ ಬದುಕು ಬಲಾಯಿತು. ಸ್ಪೂರ್ತಿ ಸಂಸ್ಥೆ ಸಂಚಾಲಕ ಡಾ.ಕೇಶವ ಕೋಟೇಶ್ವರ ಅವರು ಕಾವೇರಿ ಕೆದೂರು ಶಾಲೆಗೆ ದಾಖಲಿಸಿದರು. ಓದಿನಲ್ಲಿ ಚುರುಕಾಗಿದ್ದ ಕಾವೇರಿ ಎಲ್ಲಾ ತರಗತಿಯಲ್ಲೂ ಉತ್ತಮ ಅಂಕ ಪಡೆದು ಪಾಸಾಗುತ್ತಾ ಬಂದಳು.
ಸ್ಪೂರ್ತಿಧಾಮ ಸೇರಿದ ನಂತರ ಕಾವೇರಿ ತಂದೆ ತನ್ನ ಇನ್ನಿಬ್ಬರು ಮಕ್ಕಳ ಸ್ಪೂರ್ತೀದಾಮಕ್ಕೆ ಸೇರಿಸಿದ ನಂತರ ನಾಪತ್ತೆಯಾಗಿದ್ದು, ಕಾವೇರಿ ಇಬ್ಬರು ಒಡಹುಟ್ಟಿದವರು ಸ್ಪೂರ್ತಿದಾಮದಲ್ಲಿ ಇದ್ದಾರೆ. ಕಾವೇರಿ ತಾಯಿ ಕೂಡಾ ಮೃತಪಟ್ಟಿದ್ದಾರೆ.

ಕಾವೇರಿ ಮುಂದೆ ಎಲ್‌ಎಲ್‌ಬಿ ಮಾಡಿ ಸಮಾಜದ ನೊಂದವರ ಅನ್ಯಾಯಕ್ಕೆ ಒಳಗಾದವರ ಪರ ಕೆಲಸ ಮಾಡುವ ಆಸೆ ವ್ಯಕ್ತ ಪಡಿಸಿದ್ದು, ಕಾವೇರಿ ಎಲ್ಲಿಯ ವರೆಗೆ ಓದುತ್ತಾಳೋ ಅಲ್ಲಿವರೆ ಓದಿಸುವ ಜವಾಬ್ದಾರಿ ಸ್ಟೂರ್ತಿ ಸಂಸ್ಥೆ ಸಂಚಾಲಕ ಡಾ.ಕೇಶವ ಕೋಟೇಶ್ವರ ವಹಿಸಿಕೊಂಡಿದ್ದಾರೆ.

Comments are closed.