ಕರಾವಳಿ

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಅದಿಥಿಗೆ ಸಿಎ ಆಗುವಾಸೆ

Pinterest LinkedIn Tumblr

ಮಂಗಳೂರು, ಮೇ.01: 2017-18ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ 594 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ನಗರದ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಅದಿಥಿ ಸಿಎ ಆಗಬೇಕೆಂಬ ಕನಸು ಹೊತ್ತಿದ್ದಾರೆ.

ಮೂಲತ: ರಾಜಸ್ತಾನದ ಅತುಲ್ ಕುಮಾರ್ ಸುರಾನ ಹಾಗೂ ದೀಪಾಲಿ ದಂಪತಿಯ ಪುತ್ರಿ ಅದಿಥಿ ತಮ್ಮ ಕುಟುಂಬದ ಜತೆ ಕಳೆದ 19 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ. ನಗರದಲ್ಲಿ ಫೈನಾನ್ಸ್ ಸಂಸ್ಥೆಯನ್ನು ಹೊಂದಿರುವ ಅತುಲ್ ಕುಮಾರ್ ಮಗಳ ಈ ಸಾಧನೆ ಬಗ್ಗೆ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ.

ಚೆಸ್‌ನಲ್ಲಿ ಕೂಡ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಪ್ರತಿಭೆ ಅದಿಥಿ,ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದಾರೆ. ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ನಿರೀಕ್ಷೆ ಇರಲಿಲ್ಲ. ಆದರೆ ಉತ್ತಮ ಫಲಿತಾಂಶ ನಿರೀಕ್ಷಿಸಿದ್ದೆ.ಕ್ರಮ ಬದ್ಧ ಓದಿನಿಂದ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಯಿತು. ನಾನು ತರಗತಿಯಲ್ಲಿ ಅಲ್ಲದೆ ಮನೆಯಲ್ಲಿ 3 ಗಂಟೆಗಳನ್ನು ಓದಿಗಾಗಿ ಮೀಸಲಿಡುತ್ತಿದ್ದೆ” ಎಂದು ಅದಿಥಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Comments are closed.