ಕರಾವಳಿ

ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮಾತ್‌ರಿಂದ ನಗರದ ಗಣ್ಯರ ಭೇಟಿ : ಬಿಜೆಪಿ ಬೆಂಬಲಿಸುವಂತೆ ಮನವಿ

Pinterest LinkedIn Tumblr

ಮಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಮೇ 12ಕ್ಕೆ ನಡೆಯಲಿದ್ದು, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಿ ವೇದವ್ಯಾಸ ಕಾಮತ್ ಅವರು ಮತಯಾಚನೆ ಪ್ರಯುಕ್ತ ನಗರದ ಮನೆ ಮನೆಗಳಿಗೆ ಭೇಟಿ ನೀಡಿ ಹಾಗೆಯೇ ಸಮಾಜದ ಗಣ್ಯ ವ್ಯಕ್ತಿಗಳನ್ನು ಭೇಟಿಮಾಡಿ ಮತಯಾಚಿಸಿದರು.

ನಗರದ ಪ್ರಸಿದ್ಧ ಹೊಮ್ಯೊಪತಿ ಡಾಕ್ಟರ್ ಮತ್ತು ಕಂಕನಾಡಿ ಹೊಮ್ಯೊಪತಿ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ರು ಆಗಿದ್ದ Dr.ಶಸಿಕಾಂತ್ ತಿವಾರಿ(Dr.S.K.Tiwari) ಇವರನ್ನು ಭೇಟಿ ಮಾಡಿ ಮತ ಯಾಚಿಸಿ ಅವರ ಆರ್ಶೀವಾದ ಪಡೆದರು.ವೇದವ್ಯಾಸರಿಗೆ ಡಾ.ತಿವಾರಿಯವರು ಗೆದ್ದು ಶಾಸಕನಾಗಿ ಜನ ಮೆಚ್ಚುವ ಕೆಲಸ ಮಾಡಿ ಕೀರ್ತಿಗಳಿಸಿ ಎಂದು ಶುಭ ಹಾರೈಸಿದರು.

ಶ್ರೀ ವೇದವ್ಯಾಸರ ಜೊತೆಗೆ ನಗರದ ಪ್ರಸಿದ್ಧ ಕುದ್ರೋಳಿ ಶ್ರೀ ಗೊಕರ್ಣನಾಧ ದೇವಾಲಯದ ಮೊಕ್ತೇಸರ ಹಾಗು BJP ಜಿಲ್ಲಾ ಉಪಾಧ್ಯಕ್ಷ ರಾಗಿರುವ ರವಿಶಂಕರ್ ಮಿಚಾರ್,ಚುನಾವಣೆಯ BJP ವಕ್ತಾರ ಉಳ್ಳಾಲ ರತ್ನಾಕರ ನಾಯಕ್,ಹಿರಿಯ ಕಾರ್ಯಕರ್ತ ಜಯಪ್ರಕಾಶ್ ಮುಂತಾದವರು ಜೊತೆಯಲ್ಲಿ ಉಪಸ್ಥಿತರಿದ್ದರು.

ಉರ್ವಾಸ್ಟೋರ್‌ನಲ್ಲಿ ಮತಯಾಚನೆ :

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಉರ್ವಸ್ಟೋರ್ ವಾರ್ಡ್ ನಂ 25 ರಲ್ಲಿ ಮನೆ ಮನೆಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮೊದಲಿಗೆ ನಗರದ ಉರ್ವಸ್ಟೋರ್ ಕೊಟ್ಟಾರದ ಶ್ರೀ ಮಹಾಗಣಪತಿ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ ಬಳಿಕ ಡಿ.ವೇದವ್ಯಾಸ್ ಕಾಮತ್ ಅವರು ಪರಿಸರದಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ್ ಶ್ರೀ ರವಿಶಂಕರ್ ಮಿಜಾರ್, ಭಾಸ್ಕರ್ ಚಂದ್ರ ಶೆಟ್ಟಿ, ಗುರುಪ್ರಸಾದ್ ರಾವ್, ಕೃಷ್ಣ, ಉಮೇಶ್ ಶೆಟ್ಟಿ, ಅಮಿತ್, ರಾಮಕೃಷ್ಣ, ಸುರೇಶ್, ಸುಭಾಷ್, ವಸಂತ್, ಗೀತಾ, ರಾಮೇಶ್ವರಿ, ಮುಂತಾದವರು ಉಪಸ್ಥಿತರಿದ್ದರು.

Comments are closed.