ಕರಾವಳಿ

ಪೋರ್ಟ್ ವಾರ್ಡಿನ ಅಬ್ದುಲ್ ಸಲಾಂ ಸಹಿತ 30ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Pinterest LinkedIn Tumblr

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತಪ್ರಚಾರ ಬಿರುಸಿನಿಂದ ಸಾಗಿದೆ. ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಬಿಜೆಪಿ ಕಾರ್ಯಕರ್ತರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ಮಧ್ಯೆ ಪೋರ್ಟ್ ವಾರ್ಡಿನ ಕಂದುಕ ಪ್ರದೇಶದ ಮೂವತ್ತಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಅಬ್ದುಲ್ ಸಲಾಂ ಕಂದುಕ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಮಂಗಳೂರು ಮನಪಾ ಸದಸ್ಯರಾದ ಪ್ರೇಮಾನಂದ ಶೆಟ್ಟಿ , ಬಿ ಜೆ ಪಿ ಮುಖಂಡರ ಭಾಸ್ಕರ್ ಚಂದ್ರ ಶೆಟ್ಟಿ , ಸದಾನಂದ ನಾವರ , ಅನಿಲ್ ಕುಮಾರ್ , ಶಶಿರಾಜ್ ಕೊಳಂಬೆ , ಅಲ್ಪಸಂಖ್ಯಾತ ಮೋರ್ಚಾದ ಮುತಾಲಿಬ್ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಪಕ್ಷದ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಪರ ಪಕ್ಷಕಾಗ್ಗಿ ದುಡಿಯುವ ಭರವಸೆ ನೀಡಿದರು .

ಪಕ್ಷಕ್ಕೆ ಸೇರ್ಪಡೆಗೊಂಡ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ, ವಾರ್ಡ್ ಗಳಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ವೇದವ್ಯಾಸ್ ಕಾಮತ್‌ರಿಂದ ಕದ್ರಿ ಪರಿಸರದಲ್ಲಿ ಮತಯಾಚನೆ :

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ಕದ್ರಿ ಉತ್ತರ, ಪರಿಸರದಲ್ಲಿ ಜನರನ್ನು ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು..

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ್ ಶ್ರೀ ರವಿಶಂಕರ್ ಮಿಜಾರ್, ವಸಂತ್ ಜೆ ಪೂಜಾರಿ, ರೂಪಾ ಡಿ ಬಂಗೇರ, ರಿತೇಶ್ ದಾಸ್, ಪ್ರವೀಣ್ ಗುಂಡಳಿಕೆ, ಚರಣ್ ಗುಂಡಳಿಕೆ, ಮಿಥುನ್, ಸಂತೋಷ್, ಪ್ರಕಾಶ್, ಅರುಣ್, ಮನೋಜ್, ಕಾರ್ತಿಕ್, ಧನರಾಜ್, ಮಹೇಶ್, ಪ್ರಸನ್ನ, ಚೇತನ್, ಅನಿಲ್, ದಿನೇಶ್ ಬಂಗೇರ ಮುಂತಾದವರು ಉಪಸ್ಥಿತರಿದ್ದರು.

Comments are closed.