ಮಂಗಳೂರು, ಮೇ.11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಮತಗಟ್ಟೆಗೆ ತೆರಳಲು ಅಧಿಕಾರಿಗಳು ಸಿದ್ಧಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿರುವ ಒಟ್ಟು 1,858 ಮತಗಟ್ಟೆಗಳಲ್ಲಿ ಮೇ 12 ರಂದು ನಡೆಯುವ ಮತದಾನಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.
ಮತದಾನದ ಅವಧಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಇರುತ್ತದೆ. ಜಿಲ್ಲೆಯಲ್ಲಿ ಒಟ್ಟು 17,11,878 ಮತದಾರರಿದ್ದಾರೆ. ಅವರಲ್ಲಿ 8,41,073 ಪುರುಷರು ಹಾಗೂ 8,70,675 ಮಹಿಳೆಯರು. ಅಲ್ಲದೆ 100 ಮಂದಿ ಲೈಂಗಿಕ ಅಲ್ಪಸಂಖ್ಯಾಕ ಮತದಾರರಿದ್ದಾರೆ. 20 ಪಿಂಕ್ ಮತ್ತು 5 ಎತ್ನಿಕ್ ಮತದಾನ ಕೇಂದ್ರಗಳನ್ನು ಸ್ವೀಪ್ ಸಮಿತಿ ಗುರುತಿಸಿದೆ.7,569 ಮತ ಯಂತ್ರ:1,858 ಮತಗಟ್ಟೆಗಳಿಗೆ 7,569 ಮತ ಯಂತ್ರ ಒದಗಿಸಲಾಗಿದೆ. ಶೇ.20ರಷ್ಟು ಮತ ಯಂತ್ರಗಳು ಮೀಸಲಿರಬೇಕೆಂಬ ನಿಯಮವಿದ್ದು, ಹೆಚ್ಚುವರಿ ಮತ ಯಂತ್ರಗಳನ್ನು ಪೂರೈಕೆ ಮಾಡಲಾಗಿದೆ.
ಬಂಟ್ವಾಳದಲ್ಲಿ ಮತಪೆಟ್ಟಿಗೆಗಳನ್ನ ಹೊತ್ತು ಮತಗಟ್ಟೆಯ ಹತ್ತಿರ ತರಳುತ್ತಿರುವ ಚುನಾವಣಾ ಅಧಿಕಾರಿಗಳು
ಇವಿಎಂ ಮಷಿನ್‌ಗಳ ಬಾಕ್ಸ್‌ಗಳನ್ನು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗೆ ಕೊಂಡೊಯ್ಯುತ್ತಿದ್ದಾರೆ. ಮತದಾನದ ಸಂದರ್ಭದಲ್ಲಿ ಯಾವುದೇ ಚ್ಯುತಿ ಬಾರದಂತೆ ಜಿಲ್ಲಾ ಚುನಾವಣಾ ಆಯೋಗ ನಿಗಾ ವಹಿಸಿದೆ.
ದ.ಕ. ಜಿಲ್ಲೆಯಲ್ಲಿ 12,837 ಮತಗಟ್ಟೆ ಅಧಿಕಾರಿಗಳು, 1,295 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ 8 ಕ್ಷೇತ್ರಗಳಿಗೆ 13,176 ಮತಗಟ್ಟೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, 4 ಮತಗಟ್ಟೆ ಅಧಿಕಾರಿ ಮತ್ತು ಒಬ್ಬ ಗ್ರೂಪ್ ಡಿ ಸಿಬಂದಿಯನ್ನು ನಿಯೋಜಿಸಲಾಗಿದೆ. ಕ್ಲಿಷ್ಟ ಮತಗಟ್ಟೆಗೆ ಓರ್ವ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ.
ಚುನಾವಣಾ ಕರ್ತವ್ಯ ಮುಕ್ತಾಯವಾದ ಬಳಿಕ ಡಿಮಸ್ಟರಿಂಗ್ ಕೇಂದ್ರಕ್ಕೆ ಕರೆತರಲು 648 ವಾಹನಗಳ ವ್ಯವಸ್ಥೆ :
ದ.ಕ. ಜಿಲ್ಲೆಯಲ್ಲಿ 17,11,848 ಮತದಾರರಿದ್ದು 8,70,675 ಮಹಿಳಾ ಮತದಾರರು ಹಾಗೂ 8,41,073 ಪುರುಷ ಮತದಾರರು ಇದ್ದಾರೆ.ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆಗಳಿಗೆ ತಲುಪಿಸಿ ಚುನಾವಣ ಕರ್ತವ್ಯ ಮುಕ್ತಾಯವಾದ ಬಳಿಕ ಡಿ – ಮಸ್ಟರಿಂಗ್ ಕೇಂದ್ರಕ್ಕೆ ಕರೆದೊಯ್ಯುವ ಬಗ್ಗೆ ಒಟ್ಟು 648 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಚುನಾವಣ ಅಧಿಕಾರಿ ನೇಮಕ :
ಚುನಾವಣಾಧಿಕಾರಿಗಳು: ಎಲ್ಲ 8 ಕ್ಷೇತ್ರಗಳಿಗೆ ಚುನಾವಣ ಅಧಿಕಾರಿ ನೇಮಕ ಮಾಡಲಾಗಿದೆ. ಬೆಳ್ತಂಗಡಿ- ಎಚ್.ಆರ್. ನಾಯ್ಕ (95914 17218), ಮೂಡಬಿದಿರೆ- ವಿ. ಪ್ರಸನ್ನ (9731192244), ಮಂಗಳೂರು ನಗರ ಉತ್ತರ – ಎಸ್.ಬಿ. ಪ್ರಶಾಂತ್ ಕುಮಾರ್ (7760432770), ಮಂಗಳೂರು ನಗರ ದಕ್ಷಿಣ – ಆ್ಯಂಟನಿ ಮರಿಯಾ ಇಮ್ಯಾನುವೆಲ್ (8277931060), ಮಂಗಳೂರು- ಮಹೇಶ್ ಕರ್ಜಗಿ (9448933653), ಬಂಟ್ವಾಳ- ರವಿ ಬಸರಿಹಳ್ಳಿ (9902967070), ಪುತ್ತೂರು- ಎಚ್.ಕೆ. ಕೃಷ್ಣ ಮೂರ್ತಿ (7760292048), ಸುಳ್ಯ- ಬಿ. ಟಿ. ಮಂಜುನಾಥನ್ (9448067681).
ಮತದಾನಕ್ಕೆ ಅಡ್ಡಿಪಡಿಸುವರ ವಿರುದ್ಧ ಕಠಿಣ ಕ್ರಮ : ಎಸ್ಪಿ, ಕಮಿಷನರ್ ಎಚ್ಚರಿಕೆ
ಮಂಗಳೂರು ನಗರ ಹಾಗೂ ದ.ಕ. ಜಿಲ್ಲಾದ್ಯಂತ ಮತದಾನ ಪ್ರಕ್ರಿಯೆ ಸುಗಮ ಹಾಗೂ ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಎಲ್ಲಾ ರೀತಿಯ ಬಂದೋಬಸ್ತ್‌ಗಳನ್ನು ಮಾಡಿದೆ. ಶಾಂತಿಯುತ ಮತದಾನಕ್ಕೆ ಅಡ್ಡಿಪಡಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ ಎಚ್ಚರಿಸಿದ್ದಾರೆ.
Comments are closed.