ಉಡುಪಿ: ಕಳೆದ ಬಾರಿ ಮೂರು ಮಂದಿ ಕಾಂಗ್ರೆಸ್ ಶಾಸಕರಿದ್ದ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಹೇಳ ಹೆಸರಿಲ್ಲದೇ ದೂಳಿಪಟವಾಗಿದೆ. ಬೈಂದೂರು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲವು ನಿಶ್ಚಿತ ಎಂಬ ಮಾತು ಕೇಳಿಬಂದರೂ ಕೂಡ ಬಾರೀ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಇದು ಮೋದಿ ಹವಾ ಎಂಬ ಮಾತುಗಳು ಕೇಳಿಬರುತ್ತಿದೆ.
ಮೋದಿ ಜಿಲ್ಲೆಗೆ ಬಂದು ಹೋದ ಮೇಲೆ ಮಹತ್ತರವಾದ ಬೆಳವಣಿಗೆ ರಾಜಕೀಯ ವಲಯದಲ್ಲಿ ನಡೆದಿದ್ದು ಅದು ಮತವಾಗಿ ಬದಲಾವಣೆಯಾಗಿದೆ ಎಂಬ ಮಾತುಗಳು ರಾಜಕೀಯ ವಿಷ್ಲೇಶಕರಿಂದ ಕೇಳಿಬರುತ್ತಿದೆ. ಮೋದಿ ಮಾಸ್ಟರ್ ಫ್ಲ್ಯಾನ್ ಕರವಾಳಿ ಜಿಲ್ಲೆಯಲ್ಲಿ ಸಕ್ಸಸ್ ಆಗಿದೆ ಎನ್ನುವ ಮಾತು ಬಿಜೆಪಿಗರದ್ದು. ಒಂದೆಡೆ ಹಿಂದುತ್ವ, ಕರಾವಳಿಯಲ್ಲಿ ನಡೆದ ಕೊಲೆಗಳು ಹಾಗೂ ಮೋದಿ ಆಗಮನ ಮೊದಲಾದವುಗಳು ಈ ಬಾರಿ ಚುನಾವಣೆಯ ಪ್ರಮುಖಾಂಶಗಳಾಗಿತ್ತು.
ಜಿಲ್ಲೆಯ ಉಡುಪಿ, ಕಾಪು, ಬೈಂದೂರು, ಕುಂದಾಪುರ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮಖಾಡೆ ಮಲಗಿದೆ. ಉಡುಪಿ, ಕಾಪು, ಹಾಗೂ ಬೈಂದೂರಿನಲ್ಲಿ ಈ ಹಿಂದೆ ಕಾಂಗ್ರೆಸ್ ಶಾಸಕರಿದ್ದರು. ಬಹಳಷ್ಟು ಪ್ರಭಾವಿಗಳು ಆಗಿದ್ದವರು. ಅವರನ್ನೇ ಮಣಿಸಿ ಬಿಜೆಪಿ ಅಭ್ಯರ್ಥಿಗಳು ಬಾರಿ ಮತದ ಅಂತರದಲ್ಲಿ ಗೆಲವು ಸಾಧಿಸಿರುವುದು ಕರಾವಳಿ ಜಿಲ್ಲೆಯಲ್ಲಿ ಮತ್ತೆ ಬಿಜೆಪಿ ಅಸ್ತಿತ್ವ ಸಾಧಿಸುವ ಲಕ್ಷಣಕ್ಕೆ ಸಾಕ್ಷಿಯಾಗಿದೆ. ಇನ್ನು ಐದಕ್ಕೆ ಐದು ಕ್ಷೇತ್ರವೂ ಬಿಜೆಪಿ ತೆಕ್ಕೆಗೆ ಬಿದ್ದಿರುವುದು ಇನ್ನೊಂದು ಸಾಧನೆ ಹಾಗೂ ಇತಿಹಾಸವೂ ಆಗಿದೆ.
ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆಲುವು ಸಾಧಿಸಿದ್ದು 56405 ಮತಗಳ ಅಂತರದಿಂದ. ಅವರು ಪಡೇದ ಒಟ್ಟು ಮತ- 103434. ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಪಡೆದ ಮತ- 47029.
ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಗೆಲುವು ಸಾಧಿಸಿದ್ದು 42566 ಮತಗಳ ಅಂತರದಿಂದ. ಸುನೀಲ್ ಕುಮಾರ್ ಪಡೆದ ಮತ- 91245. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಭಂಡಾರಿ ಪಡೆದ ಮತ- 48679.
ಇನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಬಿ.ಎಂ ಸುಕುಮರ ಶೆಟ್ಟಿ ಕಾಂಗ್ರೆಸ್ ಪಕ್ಷದ ಗೋಪಾಲ ಪೂಜಾರಿ ವಿರುದ್ಧ ಸ್ಪರ್ಧಿಸಿ 24393 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸುಕುಮಾರ ಶೆಟ್ಟಿ ಒಟ್ಟು ಪಡೆದ ಮತಗಳು 96,029. ಗೋಪಾಲ ಪೂಜಾರಿ ಪಡೆದ ಮತಗಳು-71636.
ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಗೆಲುವು ಸಧಿಸಿದ್ದು 12044 ಮತಗಳ ಅಂತರದಿಂದ. ಅವರು ಪಡೆದ ಪಡೆದ ಮತ- 84946. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪಡೆದ ಮತ- 72902.
ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಲಾಲಾಜಿ ಆರ್ ಮೆಂಡನ್ ಗೆಲುವು ಸಾಧಿಸಿದ್ದು 11919 ಮತಗಳ ಅಂತರದಿಂದ. ಪಡೆದ ಒಟ್ಟು ಮತ- 75895. ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ವಿನಯ ಕುಮಾರ್ ಸೊರಕೆ ಪಡೆದ ಮತ- 63976.
Comments are closed.