ಕರಾವಳಿ

ವಾಟ್ಸ್ಯಾಪ್, ಫೇಸ್‌ಬುಕ್ ಮೂಲಕ ನಿಪಾಹ್ ಬಗ್ಗೆ ವದಂತಿ : ಸುಳ್ಳು ಸಂದೇಶಗಳಿಗೆ ಕಿವಿಕೊಡದಂತೆ ಡಿಸಿ ಸೂಚನೆ

Pinterest LinkedIn Tumblr

ಮಂಗಳೂರು : ಸಾಮಾಜಿಕ ಜಾಲತಾಣಗಳಾದ ವಾಟ್ಸ್ಯಾಪ್, ಫೇಸ್‌ಬುಕ್‌ನಲ್ಲಿ ನಿಪಾಹ್ ಕುರಿತಂತೆ ನಾನಾ ರೀತಿಯ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಈ ರೀತಿಯ ಸಂದೇಶಗಳ ಮೇಲೆ ನಿಗಾ ಇರಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟವರಿಂದ ಮಾಹಿತಿಗಳನ್ನು ದೃಢೀಕರಿಸಿಕೊಳ್ಳದೆ ಯಾವುದೇ ಸೂಚನೆ, ಸಲಹೆಗಳನ್ನು ಕೂಡಾ ನಂಬಬಾರದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಲಹೆ ನೀಡಿದ್ದಾರೆ.

ಯಾವುದೇ ರೀತಿಯ ಸಣ್ಣ ಪುಟ್ಟ ಶೀತ, ಜ್ವರ, ತಲೆನೋವು ಕಾಣಿಸಿಕೊಂಡಾಕ್ಷಣ ಅದನ್ನು ನಿಪಾಹ್ ಇರಬಹುದೆಂಬ ಶಂಕೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವೂ ಇಲ್ಲ. ಪ್ರಸ್ತುತ ಕಲ್ಲಿಕೋಟೆಯಲ್ಲಿ ಮಾತ್ರವೇ ಈ ರೋಗ ಕಾಣಿಸಿಕೊಂಡಿದ್ದು, ಅದನ್ನು ನಿಯಂತ್ರಿಸಲಾಗಿದೆ. ಹಾಗಿರುವಾಗ ಸೋಂಕು ಪೀಡಿತ ವ್ಯಕ್ತಿಯ ಜತೆಗೆ ಅತೀ ಸಾಮಿಪ್ಯದ ಸಂಪರ್ಕವಿಲ್ಲದೆ, ಈ ವೈರಸ್ ಹರಡಲು ಸಾಧ್ಯವೇ ಇಲ್ಲದ ಕಾರಣ, ಮಂಗಳೂರು ಸೇರಿದಂತೆ ಜಿಲ್ಲೆಯ ಜನತೆ ನಿರಾತಂಕವಾಗಿರ ಬಹುದು ಎಂದು ಜಿಲ್ಲಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.