ಕರಾವಳಿ

ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ಕಿಡಿಗೇಡಿಗಳಿಗೆ ‘ಕೊರಗಜ್ಜ’ ಮಾಡಿದ್ದೇನು?

Pinterest LinkedIn Tumblr

ಉಡುಪಿ: ಮತಾಂಧತೆಯ ಅಮಲಿನಲ್ಲಿ ಅನ್ಯಕೋಮಿನ ಯುವಕರ ಗುಂಪೊಂದು ಹಿಂದೂ ದೈವಕ್ಕೆ ಮಾಡ ಹೊರಟ ಅಪಮಾನ ಸದ್ಯ ಆ ಯುವಕರನ್ನು ಅನಾರೋಗ್ಯಕ್ಕೆ ತುತ್ತುಮಾಡಿದೆ. ಈ ಮೂಲಕ ತನ್ನ ಪವಾಡವನ್ನು ತೋರಿಸಲು ಹೊರಟ ಕೊರಗಜ್ಜನ ಸನ್ನಿಧಾನಕ್ಕೆ ಅನಾರೋಗ್ಯ ಪೀಡಿತರ ಕುಟುಂಬ ಆಗಮಿಸಿ ಕ್ಷಮಾಪಣೆ ಕೇಳಿದ್ದಾರೆ. ಆಮೇಲೆನಾಯ್ತು ಎಂಬುದಕ್ಕೆ ಈ ಸ್ಟೋರಿ ಓದಿ.

ಉಡುಪಿ ಜಿಲ್ಲೆಯ ಕಟಪಾಡಿ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮೀ ದೈವಸ್ಥಾನದಲ್ಲಿ ಕೆಲವಾರು ತಿಂಗಳಿನ ಹಿಂದೆ ಅಪಾಚಾರವೊಂದು ನಡೆದು ಹೋಗಿತ್ತು. ಅನ್ಯಕೋಮಿನ ಕೆಲವು ಯುವಕರು ದೈವಸ್ಥಾನದ ಮುಂಭಾಗ ಶಿವಲಿಂಗದ ಮಾದರಿಯಲ್ಲಿದ್ದ ಕಾಣಿಕೆ ಹುಂಡಿಗೆ ಮೂತ್ರ ಮಾಡಿದ್ದು ಮಾತ್ರವಲ್ಲದೇ ಹುಂಡಿಯೊಳಕ್ಕೆ ಕಾಂಡೋಮ್ ಹಾಕಿದ್ದರು. ದೈವಸ್ಥಾನದ ವಾರ್ಷಿಕ ಪೂಜೆ ಬಳಿಕ ಕಾಣಿಕೆ ಹುಂಡಿ ತೆರ್ಯುವ ಕ್ರಮ ಇಲ್ಲಿದ್ದಾಗಿದ್ದು ಹುಂಡಿ ತೆರೆದಾಗ ನಡೆದ ಅಪಚಾರ ಬೆಳಕಿಗೆ ಬಂದಿದ್ದು ಆಡಳಿತ ಮಂಡಳಿ ಹಾಗೂ ಭಕ್ತರು ಇದರಿಂದ ನೊಂದಿದ್ದರು. ಇಂತಹ ಅಪಚಾರ ಮಾಡಿದ ಕಿಡಿಗೇಡಿಗಳ ತಕ್ಕ ಪಾಠ ಕಲಿಸು ಎಂದು ದೈವದ ಮೊರೆ ಹೋಗಿದ್ದರು.

ಅದರಂತೆಯೇ ಕಟಪಾಡಿ ಸಮೀಪದ ಯುವಕನೋರ್ವ ತನ್ನ ಸೊಂಟದ ಕೆಳಭಾಗದ ಬಲ ಕಳೆದುಕೊಂಡು ನಿತ್ರಾಣನಾಗಿದ್ದ. ಅದೆಷ್ಟೇ ಚಿಕಿತ್ಸೆ ಕೊಡಿಸಿದರೂ ಕೂಡ ಅದಕ್ಕೆ ಆತನ ದೇಹ ಸ್ಪಂದಿಸುತ್ತಿರಲಿಲ್ಲ. ಕೊನೆಗೂ ಆತನ ಪೋಷಕರು ಜ್ಯೋತಿಷಿಗಳ ಬಳಿ ಪ್ರಶ್ನೆಯಿತ್ತಾಗ ಇದು ಕೊರಗಜ್ಜನ ಸನ್ನಿದಾನಕ್ಕೆ ಮಾಡಿದ ಅಪಚಾರವೆಂಬುದು ತಿಳಿದಿತ್ತು. ಕೂಡಲೇ ಇಡೀ ಕುಟುಂಬ ಶ್ರೀ ಬಬ್ಬುಸ್ವಾಮೀ ದೈವಸ್ಥಾನಕ್ಕೆ ಆಗಮಿಸಿ ದೈವದ ದರ್ಶನ ಪಡೇದಿದ್ದು ಅಲ್ಲಿ ದರ್ಶನ ಸೇವೆ ನಡೆಸಿದಾಗ ದೈವದ ಪಾತ್ರಿಯವರ ಪ್ರಶ್ನೆಗೆ ಯುವಕ ನಡೆದ ಎಲ್ಲಾ ವಿಚಾರ ಬಾಯ್ಬಿಟ್ಟಿದ್ದಾನೆ. ಅಲ್ಲದೇ ನಡೆದ ಘಟನೆಗೆ ಕ್ಷಮೆ ಕೇಳೀದ್ದಾನೆ. ದೈವವೂ ಕೂಡ ಆತನ ತಪ್ಪನ್ನು ಮನ್ನಿಸಿದ್ದು ಎಚ್ಚರಿಕೆ ನೀಡಿದೆ. ಇನ್ನೊಂದು ಮಾಹಿತಿ ಪ್ರಕಾರ ಈತನ ಜೊತೆಗಿದ್ದ ಇನ್ನೋರ್ವ ಯುವಕನ ಕಿಡ್ನಿ ಸಮಸ್ಯೆಯಾಗಿದ್ದು, ಇನ್ನೋರ್ವ ಜೀವ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.

ಒಟ್ಟಿನಲ್ಲಿ ತುಳುನಾಡಿನ ಕಾರಣಿಕ ದೈವ ಕೊರಗಜ್ಜ ಒಂದಲ್ಲ ಒಂದು ರೀತಿಯಲ್ಲಿ ತನ್ನ ಪವಾಡ ತೋರಿಸುವ ಮೂಲಕ ತನ್ನ ಅಸ್ತಿತ್ವ ನಂಬಿಕೆಯನ್ನು ಜನರಲ್ಲಿ ತೋರ್ಪಡಿಸುತ್ತಿದ್ದಾರೆ.

Comments are closed.