ಬೆಂಗಳೂರು: ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ನಡೆದ ಬಿಜೆಪಿ ಬೆಂಬಲಿತ ಬಂದ್‌ಗೆ ರಾಜ್ಯದಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೇ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬಂದ್ ನಡೆಯಲೇ ಇಲ್ಲ. ಹಾವೇರಿ, ಗದಗ, ಉತ್ತರ ಕನ್ನಡ, ಬಳ್ಳಾರಿ ಜಿಲ್ಲೆಗಳಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿರಸಿ, ಉಡುಪಿ, ದ.ಕ. ಜಿಲ್ಲೆಯಲ್ಲೂ ಬಂದ್ ನಡೆಯಲಿಲ್ಲ.
ಎಡವಿದರೇ ಯಡಿಯೂರಪ್ಪ….
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಗೂಡಿ ಸರ್ಕಾರ ನಡೆಸುತ್ತಿದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಬಗ್ಗೆ ದ್ವಂದ್ವ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಬಂದ್ ಗೆ ಕರೆ ನೀಡಿದ್ದರು. ಆದರೇ ಯಾವುದೇ ಸಂಘಟನೆಗಳನ್ನು, ರೈತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದೇ ಬಂದ್ ಯಶಸ್ವಿಯಾಗದಿರಲು ಕಾರಣವಾಯಿತು ಎನ್ನಲಾಗಿದೆ.
ಒಂದೊಮ್ಮೆ ರೈತರು, ರೈತ ಸಂಘಟನೆಗಳು, ಸಂಘಟನೆಗಳ ಮುಖಂಡರು, ಕನ್ನಡಪರ ಸಂಘಟನೆಗಳ ಜೊತೆ ಚರ್ಚೆ ನಡೆಸಿ ಬಳಿಕ ಬಿಜೆಪಿ ಈ ಬಂದ್ ನಿರ್ಧಾರ ಕೈಗೊಂಡಿದ್ದಲ್ಲಿ ಬಂದ್ ಯಶಸ್ವಿಯಾಗುವ ಸಾಧ್ಯತೆಯಿತ್ತು. ಆದರೇ ಏಕಾಏಕಿ ಬಿ.ಎಸ್.ವೈ. ಬಂದ್ ಘೋಷಣೆ ನಡೆಸಿದರು. ಬಳಿಕ ಈ ಬಗ್ಗೆ ಠೀಕೆ ವ್ಯಕ್ತವಾದ ಹಿನ್ನೆಲೆ ತಾನು ಬಂದ್ ಕರೆಕೊಟ್ಟಿಲ್ಲ. ಬಂದ್ ಕರೆಕೊಟ್ಟಿದ್ದು ರೈತರು ಎಂದು ಹೇಳಿಕೊಂಡರು. ಇನ್ನು ಬಿಜೆಪಿ ಪ್ರಾಬಲ್ಯವಿರುವ ಹಗೂ ಬಿಜೆಪಿಯ ಶಾಸಕರಿರುವ ಜಿಲ್ಲೆಗಳಲ್ಲಿಯೂ ಬಹುತೇಕ ಎಲ್ಲಿಯೂ ಬಂದ್ ಬಿಸಿ ತಟ್ಟಿರಲಿಲ್ಲ.
Comments are closed.