ಕರ್ನಾಟಕ

ರಾಜ್ಯಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದ ಆರ್ ಆರ್ ನಗರ ಕ್ಷೇತ್ರ ಫಲಿತಾಂಶ: ಕಾಂಗ್ರೆಸ್ ನ ಮುನಿರತ್ನಗೆ ಭರ್ಜರಿ ಗೆಲುವು

Pinterest LinkedIn Tumblr

ಬೆಂಗಳೂರು: ರಾಜ್ಯಾದ್ಯಂತ ಭಾರಿ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಅಂತ್ಯಗೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಲ್ಲದೆ, ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ ಬಲವನ್ನು 79ಕ್ಕೆ ಹೆಚ್ಚಿಸಿಕೊಂಡಿದೆ.

ಮುನಿರತ್ನ ಅವರು ಇತರ ಅಭ್ಯರ್ಥಿಗಳಿಗಿಂತ 25,492 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಅವರಿಗೆ 1,08.064 ಮತಗಳು ಲಭ್ಯವಾಗಿದೆ. ಬಿಜೆಪಿಯ ತುಳಸಿ ಮುನಿರಾಜು ಗೌಡ ಅವರಿಗೆ 82,572 ಮತ್ತು ಜೆಡಿಎಸ್ ನ ರಾಮಚಂದ್ರ 60,360 ಮತಗಳನ್ನು ಪಡೆದಿದ್ದಾರೆ.

ತಮ್ಮ ಅಭ್ಯರ್ಥಿ ಗೆಲುವು ಕಾಣುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತ್ತು ಕಾಂಗ್ರೆಸ್ ಕಚೇರಿ ಎದುರು ಕಾರ್ಯಕರ್ತರು ಹರ್ಷದಿಂದ ಕೇಕೆ ಹಾಕುತ್ತಾ, ಕುಣಿಯುತ್ತಾ, ಸಿಹಿ ಹಂಚುತ್ತಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಕಳೆದ ಮೇ 12ರಂದು ಕರ್ನಾಟಕ ರಾಜ್ಯಾದ್ಯಂತ ವಿಧಾನಸಭೆ ಚುನಾವಣೆ ನಡೆದಿತ್ತು. ಆದರೆ ಮತದಾರರ ಗುರುತು ಚೀಟಿ ಮತ್ತು ಇತರ ಅಕ್ರಮ ನಡೆದ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಲಾಗಿತ್ತು. ಶೇಕಡಾ 54.20 ಮತದಾನ ನಡೆದಿತ್ತು.

ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ಡುಕೊಂಡ ಮುನಿರತ್ನ 18 ಸುತ್ತುಗಳ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದರು. ಎರಡು ಸಾವಿರಕ್ಕೂ ಹೆಚ್ಚು ನೋಟಾ ಮತಗಳು ದಾಖಲಾಯಿತು. ಪಕ್ಷೇತರ ಅಭ್ಯರ್ಥಿಗಳ ಪೈಕಿ ಹುಚ್ಚ ವೆಂಕಟ್‌ ನೋಟಾಕ್ಕಿಂತಲೂ ಕಡಿಮೆ, 604

Comments are closed.