ಕರಾವಳಿ

ಕಾವೂರಿನಲ್ಲಿ ಪಾರ್ಕ್ ಮಾಡಲಾಗಿದ್ದ ಕಾರು ಬೆಂಕಿಗಾಹುತಿ : ಶಾರ್ಟ್ ಸರ್ಕ್ಯೂಟ್ ಶಂಕೆ..?(VIDEO)

Pinterest LinkedIn Tumblr

ಮಂಗಳೂರು, ಜೂನ್. 1: ಪಾರ್ಕ್ ಮಾಡಲಾಗಿದ್ದ ಕಾರೊಂದು ಆಕಸ್ಮಿಕ ಬೆಂಕಿ ಅಪಘಾತದಿಂದ ಸಂಪೂರ್ಣ ಸುಟ್ಟು ಹೋದ ಘಟನೆ ಶುಕ್ರವಾರ ರಾತ್ರಿ 10:30ರ ಸುಮಾರಿಗೆ ಮಂಗಳೂರಿನ ಕಾವೂರು ಜಂಕ್ಷನ್ ಬಳಿ ನಡೆದಿದ್ದು, ಅವಘಡದಿಂದ ಯಾವೂದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

CLICK HERE FOR VIDEO

ಮಂಗಳೂರೂ – ಬಜ್ಪೆ ವಿಮಾನ ನಿಲ್ದಾಣ ರಸ್ತೆಯಾದ ಕಾವೂರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅವಘಡ ಸಂಭವಿದೆ ಎನ್ನಲಾಗಿದ್ದು, ಘಟನೆಯಲ್ಲಿ ಕಾರು ಸಂಪೂರ್ಣ ಭಷ್ಮವಾಗಿದೆ. ಈ ಕಾರು ಬಜ್ಪೆ ನಿವಾಸಿ ಜಯರಾಜ್ ಎಂಬವರಿಗೆ ಸೇರಿದಾಗಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Comments are closed.