ಉಡುಪಿ: ಯುರೋಪ್ ಪ್ರವಾಸಕ್ಕೆ ತೆರಳಿದ್ದ ಕುಟುಂಬವೊಂದು ಮನೆಗೆ ವಾಪಾಸ್ ಬಂದಾಗ ಶಾಕ್ ಕಾದಿತ್ತು. ಮನೆಯಲ್ಲಿದ್ದ ಎಂಟೂವರೆ ಲಕ್ಷ ಮೌಲ್ಯದ ಚಿನ್ನಭರಣ ಹಾಗೂ ನಗದು ಕಳವಾಗಿತ್ತು. ಈ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.
ಇಲ್ಲಿನ ದಶರಥ ನಗರ ನಿವಾಸಿ ದಿನೇಶ್ ಬಿ. ಶೆಟ್ಟಿಯವರು ಕಳೆದ ಕೆಲವಾರು ದಿನಗಳ ಹಿಂದೆ ಕುಟುಂಬಿಕರ ಜೊತೆ ಯುರೋಪ್ ಪ್ರವಾಸಕ್ಕೆ ತೆರಳಿದ್ದು ನಿನ್ನೆಯಷ್ಟೇ (ಶುಕ್ರವಾರ) ಮನೆಗೆ ವಾಪಾಸ್ಸಾಗಿದ್ದು ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಹಿಂಬದಿಯ ಗ್ರಿಲ್ ಗೆ ಹಾಕಿದ ಬೀಗವನ್ನು ಒಡೆದು ನಂತರ ಮನೆಯ ಬಾಗಿಲನ್ನು ಮುರಿದು ಒಳಪ್ರವೇಶಿಸಿ ವಾರ್ಡೊಬ್‌ನಲ್ಲಿದ್ದ ಕಬ್ಬಿಣದ ಲಾಕರನ್ನು ಒಡೆದು ಲಾಕರಿನಲ್ಲಿಟ್ಟಿದ್ದ ಸುಮಾರು 2,50,000 ನಗದು ಹಾಗೂ ಸುಮಾರು 200 ಗ್ರಾಂ ತೂಕದ 6,00,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 8,50,000 ರೂ. ಆಗಿದೆ ಎನ್ನಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.