ಕರಾವಳಿ

ಜೂನ್.8: ವಿಧಾನ ಪರಿಷತ್ ಪದವೀಧರರ/ಶಿಕ್ಷಕರ ಕ್ಷೇತ್ರದ ಚುನಾವಣೆ : ದ.ಕ.ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣ : ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು, ಜೂನ್. 06: ಕರ್ನಾಟಕ ನೈರುತ್ಯ ವಿಧಾನ ಪರಿಷತ್ ಪದವಿಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಜೂನ್ 8ರಂದು ಬೆ.7ರಿಂದ ಸಂಜೆ 5ರವರೆಗೆ ಜಿಲ್ಲೆಯಲ್ಲಿ ಒಟ್ಟು 37 ಮತದಾನ ಕೇಂದ್ರ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತ ಚುನಾವಣಾ ಆಯೋಗದ ಅಧಿಸೂಚನೆಯಂತೆ ಕನಾಟಕ ನೈರುತ್ಯ ಪದವೀಧರ/ಶಿಕ್ಷಕರ ಕ್ಷೇತ್ರದ ದೈವಾರ್ಷಿಕ ಚುನಾವಣೆಗೆ ಜಿಲ್ಲೆಯಲ್ಲಿ ಕ್ರಮವಾಗಿ ಪದವೀಧರ ಕ್ಷೇತ್ರಕ್ಕಾಗಿ 23 ಮತಗಟ್ಟೆಗಳು ಮತ್ತು ಶಿಕ್ಷಕರ ಕ್ಷೇತ್ರಕ್ಕಾಗಿ 14 ಮತಗಟ್ಟೆಗಳನ್ನು ಅಳವಡಿಸಲಾಗಿದೆ. ಪದವಿಧರ ಕ್ಷೇತ್ರದಲ್ಲಿ 7223 ಪುರುಷರು, 8271 ಮಹಿಳೆಯರು ಸೇರಿದಂತೆ ಒಟ್ಟು 15494 ಮತದಾರರಿದ್ದಾರೆ. ಶಿಕ್ಷಕರ ವಿಭಾಗದಲ್ಲಿ 2944 ಪುರುಷರು ಮತ್ತು 4196 ಮಹಿಳೆಯರು ಸೇರಿದಂತೆ ಒಟ್ಟು 7140 ಮತದಾರರು ಮತಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಜೂನ್ 8 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕ್ಷೇತ್ರದ ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಿರುವ ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗಳಿಗೆ ತೆರಳಿ ಮತದಾನವನ್ನು ಮಾಡಬಹುದು. ಅಲ್ಲದೆ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದವರು ಅಧಿಕೃತ ದಾಖಲೆಗಳಲ್ಲಿ ಯಾವುದಾದರೊಂದನ್ನು ಪತಗಟ್ಟೆಯಲ್ಲಿ ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.

ಅಭ್ಯರ್ಥಿಗಳ ವಿವರ :

ನೈರುತ್ಯ ಪದವೀಧರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು: ಅರುಣ್ ಕುಮಾರ್-ಜನತಾದಳ(ಜಾತ್ಯಾತೀತ), ಅಯನೂರು ಮಂಜುನಾಥ್-ಭಾರತೀಯ ಜನತಾ ಪಾರ್ಟಿ, ಎಸ್.ಪಿ. ದಿನೇಶ್- ಕಾಂಗ್ರೆಸ್, ಜಿ.ಸಿ. ಪಟೇಲ್-ಸರ್ವ ಜನತಾ ಪಾರ್ಟಿ, ಜಫರುಲ್ಲಾ ಸತ್ತರ್ ಖಾನ್-ಪಕ್ಷೇತರ, ಜಿ.ಎಂ. ಜಯಕುಮಾರ್-ಪಕ್ಷೇತರ, ಬಿ.ಕೆ. ಮಂಜುನಾಥ-ಪಕ್ಷೇತರ.

ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು: ಕ್ಯಾ. ಗಣೇಶ್ ಕಾರ್ಣಿಕ್-ಭಾರತೀಯ ಜನತಾ ಪಾರ್ಟಿ, ಎಸ್.ಎಲ್. ಬೋಜೆಗೌಡ-ಜನತಾದಳ(ಜಾತ್ಯಾತೀತ), ಕೆ.ಕೆ. ಮಂಜುನಾಥ ಕುಮಾರ್ (ಮಾಸ್ಟರ್)- ಕಾಂಗ್ರೆಸ್, ಡಾ: ಅರುಣ್ ಹೊಸಕೊಪ್ಪ-ಪಕ್ಷೇತರ, ಅಲೋಸಿಯಸ್ ಡಿಸೋಜ-ಪಕ್ಷೇತರ, ಕೆ.ಬಿ. ಚಂದ್ರೋಜಿ ರಾವ್-ಪಕ್ಷೇತರ, ಡಿ.ಕೆ. ತುಳಸಪ್ಪ-ಪಕ್ಷೇತರ, ಅಂಪಾರ ನಿತ್ಯಾನಂದ ಶೆಟ್ಟಿ-ಪಕ್ಷೇತರ, ಪ್ರಭುಲಿಂಗ ಬಿ.ಆರ್.-ಪಕ್ಷೇತರ, ಬಸವರಾಜಪ್ಪ ಕೆ.ಸಿ. – ಪಕ್ಷೇತರ, ಎಂ. ರಮೇಶ-ಪಕ್ಷೇತರ, ರಾಜೇಂದ್ರ ಕುಮಾರ್ ಕೆ.ಪಿ. -ಪಕ್ಷೇತರ.

ಮತದಾರರಿಗೆ ಸೂಚನೆ:

ಮತಗಟ್ಟೆಯಲ್ಲಿ ನೀಡಲಾಗುವ ಬಣ್ಣದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಬೇಕು .ಪ್ರಥಮ ಪಾಶಸ್ತ್ಯದ ಮತವನ್ನು (1) ಎನ್ನುವ ಅಂಕಿಯ ಮೂಲಕ ದಾಖಲಿಸ ಬೇಕು .ಉಳಿದಂತೆ 2..3..4 ಎಂದು ಇತರ ಪ್ರಾಶಸ್ತ್ಯದ ಮತ ನೀಡಲು ಅವಕಾಶವಿದೆ. ಒಂದು ಎಂದು ಅಕ್ಷರದಲ್ಲಿ ಬರೆದರೆ ಅಸಿಂಧು ವಾಗುತ್ತದೆ. ಪ್ರಥಮ ಪಾಶಸ್ತ್ಯಮತವನ್ನು ದಾಖಲಿಸುವುದು ಕಡ್ಡಾಯ ಇಲ್ಲದೆ ಇದ್ದರೆ ಅಸಿಂಧುವಾಗುತ್ತದೆ. ಪ್ರಥಮ ಎಣಿಕೆಯ ಸುತ್ತಿನಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಮಾತ್ರ ನಡೆಯುತ್ತಿದೆ. ಯಾವೂದೇ ಅಭ್ಯರ್ಥಿಗೆ ನಿಗದಿ ಪಡಿಸಿದ ಕೋಟಾದಷ್ಟು ಮತಗಳು ಲಭಿಸದೆ ಇದ್ದಾಗ ಮಾತ್ರ ಎರಡನೆ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪದವೀಧರ ಕ್ಷೇತ್ರದ ಮತದಾರರಿಗೆ ಬಲಗೈಯ ತೋರು ಬೆರಳಿಗೆ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರಿಗೆ ಮತದಾನ ಕೇಂದ್ರದಲ್ಲಿ ಬಲಗೈಯ ಮಧ್ಯದ ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುವುದು. ಮತದರರು ಹನ್ನೆರಡು ಗುರುತು ಪತ್ರದಲ್ಲಿ ಯಾವೂದಾದರು ಒಂದನ್ನು ಮತದಾನ ಕೇಂದ್ರದಲ್ಲಿ ಹಾಜರು ಪಡಿಸಬೇಕಾಗಿದೆ. ಜೂನ್ 12ರಂದು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಚುನಾವಣಾಧಿಕಾರಿ ಪ್ರಾದೇಶಿಕ ಆಯುಕ್ತರ ಸಮ್ಮುಖದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.

ದ.ಕ. ಜಿಲ್ಲೆಯ ಮತಗಟ್ಟೆಗಳ ವಿವರ :

ಪದವೀಧರರ ಕ್ಷೇತ್ರ:

ಮುಲ್ಕಿ-ನಗರ ಪಂಚಾಯತ್ ಕಟ್ಟಡ
ಮೂಡಬಿದ್ರೆ-ಪುರಸಭೆ ಕಟ್ಟಡ(2 ಮತಗಟ್ಟೆ),
ಸುರತ್ಕಲ್-ಗೋವಿಂದದಾಸ ಕಾಲೇಜು(2 ಮತಗಟ್ಟೆ),
ಬಜಪೆ-ಪಂಚಾಯತ್ ಕಟ್ಟಡ,
ಗುರುಪುರ- ಸರಕಾರಿ ಪದವಿಪೂರ್ವ ಕಾಲೇಜು,
ಹಂಪನಕಟ್ಟೆ-ಯುನಿವರ್ಸಿಟಿ ಕಾಲೇಜು ಮಂಗಳೂರು-(5 ಮತಗಟ್ಟೆಗಳು),
ಕೊಣಾಜೆ-ವಿಶ್ವ ಮಂಗಳಾ ಇಂಗ್ಲೀಷ್ ಮೀಡಿಯಂ ಸ್ಕೂಲು, ಕೊಣಾಜೆ,
ಬಬ್ಬುಕಟ್ಟೆ-ದ.ಕ ಜಿಲ್ಲಾ ಪಂಚಾಯತ್ ಹೈಯರ್ ಪ್ರೈಮರಿ ಸ್ಕೂಲ್,
ಬಿ.ಸಿ. ರೋಡ್-ಮಿನಿ ವಿಧಾನ ಸೌಧ ತಾಲೂಕು ಕಟ್ಟಡ,(3 ಮತಗಟ್ಟೆ),
ಬೆಳ್ತಂಗಡಿ-ತಾಲೂಕು ಕಚೇರಿ(2 ಮತಗಟ್ಟೆ),
ಪುತ್ತೂರು-ತಾಲೂಕು ಪಂಚಾಯತ್ ಕಚೇರಿ(2 ಮತಗಟ್ಟೆ),
ಸುಳ್ಯ-ತಾಲೂಕು ಕಚೇರಿ,
ಪಂಜ-ನಾಡ ಕಚೇರಿ.

ಶಿಕ್ಷಕರ ಕ್ಷೇತ್ರ:

ಮುಲ್ಕಿ-ನಗರ ಪಂಚಾಯತ್,
ಮೂಡಬಿದ್ರೆ-ಪುರಸಭೆ ಕಟ್ಟಡ,
ಸುರತ್ಕಲ್-ಗೋವಿಂದದಾಸ ಕಾಲೇಜು,
ಬಜಪೆ-ಪಂಚಾಯತ್ ಕಟ್ಟಡ,
ಗುರುಪುರ-ಸರಕಾರಿ ಪದವಿಪೂರ್ವ ಕಾಲೇಜು,
ಹಂಪನಕಟ್ಟೆ-ಯುನಿವರ್ಸಿಟಿ ಕಾಲೇಜು ಮಂಗಳೂರು-(2 ಮತಗಟ್ಟೆಗಳು),
ಕೊಣಾಜೆ-ವಿಶ್ವ ಮಂಗಳಾ ಇಂಗ್ಲೀಷ್ ಮೀಡಿಯಂ ಸ್ಕೂಲು,
ಬಬ್ಬುಕಟ್ಟೆ-ದ.ಕ ಜಿಲ್ಲಾ ಪಂಚಾಯತ್ ಹೈಯರ್ ಪ್ರೈಮರಿ ಸ್ಕೂಲ್,
ಬಿ.ಸಿ. ರೋಡ್-ಸಾಮಥ್ರ್ಯ ಸೌಧ ತಾಲೂಕು ಪಂಚಾಯತ್ ಕಟ್ಟಡ,
ಬೆಳ್ತಂಗಡಿ-ತಾಲೂಕು ಕಚೇರಿ,
ಪುತ್ತೂರು-ತಾಲೂಕು ಪಂಚಾಯತ್ ಕಚೇರಿ,
ಸುಳ್ಯ-ತಾಲೂಕು ಕಚೇರಿ,
ಪಂಜ-ನಾಡ ಕಚೇರಿ.

Comments are closed.