ಟಿ.ಆರ್.ಸುರೇಶ್
ಮಂಗಳೂರು, ಜೂನ್.10: ಮಂಗಳೂರು ನಗರ ಪೊಲೀಸ್ ಕಮೀಷನರ್ ವಿಪುಲ್ ಕುಮಾರ್ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಟಿ.ಆರ್.ಸುರೇಶ್ ಅವರನ್ನು ಮರು ನಿಯೋಜನೆ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಟಿ.ಆರ್.ಸುರೇಶ್ ಅವರು ಬೆಂಗಳೂರು ಅಗ್ನಿಶಾಮಕ ದಳದ ಡಿಐಜಿಯಾಗಿ ವರ್ಗಾವಣೆಗೊಂಡಿದ್ದರು. ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡಮಿಯ ಐಜಿಪಿ ಮತ್ತು ನಿರ್ದೇಶಕರಾಗಿದ್ದ ವಿಪುಲ್ ಕುಮಾರ್ ಅವರನ್ನು ಚುನಾವಣಾ ಆಯೋಗವು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನಿಯುಕ್ತಿಗೊಳಿಸಿತ್ತು.
ವಿಪುಲ್ ಕುಮಾರ್
ಇದೀಗ ಚುನಾವಣಾ ಪ್ರಕ್ರಿಯೆಗಳು ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾರ್ಯವಿರ್ವಾಹಿಸುತ್ತಿದ್ದ ಟಿ.ಆರ್.ಸುರೇಶ್ ಅವರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ಮರು ನಿಯೋಜನೆ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ .ಮಂಗಳೂರು ನಗರ ಪೊಲೀಸ್ ಕಮೀಷನರ್ ಅಗಿದ್ದ ವಿಪುಲ್ ಕುಮಾರ್ ಅವರನ್ನು ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡಮಿಯ ಐಜಿಪಿ ಮತ್ತು ನಿರ್ದೇಶಕರಾಗಿ ಮರು ನಿಯೋಜನೆ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ.
ಈ ಮೂಲಕ ಟ.ಆರ್.ಸುರೇಶ್ ಮತ್ತು ವಿಫುಲ್ ಕುಮಾರ್ ಅವರು ತಮ್ಮ ತಮ್ಮ ಸ್ವಾಸ್ಥಾನಕ್ಕೆ ಮರಳಿದ್ದಾರೆ.
Comments are closed.