ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಫಿಟ್ನೆಸ್ ಸವಾಲಿನ ಕುರಿತು ಕರ್ನಾಟಕ ಸಿಎಂ ಕುಮಾರಸ್ವಾಮಿ ಅವರ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್ ಡಿ ಕುಮಾರಸ್ವಾಮಿ ಅವರು, ನನ್ನ ಆರೋಗ್ಯದ ಕುರಿತು ಕಾಳಜಿ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ವಂದನೆಗಳು. ನನ್ನ ಆರೋಗ್ಯಕ್ಕಾಗಿ ನಾನು ನಿತ್ಯ ಯೋಗ ಮತ್ತು ಟ್ರೆಡ್ ಮಿಲ್ ಬಳಕೆ ಮಾಡುತ್ತೇನೆ. ಇದಲ್ಲದೆ ಕೆಲ ದೈಹಿಕ ವ್ಯಾಯಾಮಗಳನ್ನು ಮಾಡುತ್ತೇನೆ. ಆದರೆ ಪ್ರಸ್ತುತ ನಾನು ನನ್ನ ದೈಹಿಕ ಫಿಟ್ನೆಸ್ ಗಿಂತ ನನ್ನ ರಾಜ್ಯದ ಅಭಿವೃದ್ಧಿಯ ಫಿಟ್ನೆಸ್ ಬಗ್ಗೆ ನನಗೆ ಹೆಚ್ಚು ಕಾಳಜಿಯಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕರಾ ಮತ್ತು ನಿಮ್ಮ ಬೆಂಬಲವಿರುತ್ತದೆ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಇಂದು ಬೆಳಗ್ಗೆಯಷ್ಟೇ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ನೀಡಿದ್ದ ಫಿಟ್ನೆಸ್ ಸವಾಲು ಸ್ವೀಕರಿಸಿದ್ದರು. ಅಲ್ಲದೆ ತಮ್ಮ ಯೋಗ ವಿಡಿಯೋವನ್ನು ಅಪ್ಲೋಡ್ ಮಾಡಿ, ಕರ್ನಾಟಕ ಸಿಎಂ ಕುಮಾರಸ್ವಾಮಿ ಮತ್ತು ಟೆಬಲ್ ಟೆನ್ನಿಸ್ ಆಟಗಾರರಾದ ಮಾನಿಕ್ ಬಾತ್ರಾ, ಭಾರತದ ಸಮಸ್ತ ಪೊಲೀಸ್ ಅಧಿಕಾರಿಗಳು ಪ್ರಮುಖವಾಗಿ 40 ವರ್ಷ ಮೀರಿದ ಅಧಿಕಾರಿಗಳಿಗೆ ಫಿಟ್ನೆಸ್ ಸವಾಲು ನೀಡಿದ್ದರು.
ಕೇಂದ್ರದ ಯುವಜನ ಮತ್ತು ಕ್ರೀಡಾಭಿವೃದ್ಧಿ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಈ ಫಿಟ್ನೆಸ್ ಸವಾಲು ಅಭಿಯಾನವನ್ನು ಆರಂಭಿಸಿದ್ದರು.
Comments are closed.