ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಈದುಲ್ ಫಿತ್ರ್ ಸಂಭ್ರಮ ಜೋರಗಿತ್ತು. ಅಂತೆಯೇ ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಈದುಲ್ ಫಿತ್ರ್ ಸಂಭ್ರಮದಿಂದ ನಡೆಯುತ್ತಿದೆ. ಬೆಳಿಗ್ಗೆನಿಂದಲೇ ಮಸೀದಿಗಳಲ್ಲಿ ದುವಾ ಹಾಗೂ ಪ್ರಾರ್ಥನೆ ಸಲ್ಲಿಸಿ ಮುಸ್ಲೀಂ ಬಾಂಧವರು ಪರಸ್ಪರ ಆಲಿಂಗನದ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
ಕುಂದಾಪುರದ ಜಾಮೀಯಾ ಮಸೀದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲೀಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ ಬೋರ್ಡ್ ಹೈಸ್ಕೂಲಿಗೆ ಸಾಗಿ ಅಲ್ಲಿರುವ ಈದ್ಗಾದ ಎದುರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪುಟಾಣಿ ಮಕ್ಕಳು ಧರಿಐದ ಪೋಷಾಕು ಎಲ್ಲರ ಗಮನ ಸೆಳೆದಿತ್ತು. ಜಾಮೀಯಾ ಮಸೀದಿ ಖತೀಬರಾದ ಮುಪ್ತಿ ಸಮಿಯುಲ್ಲಾ ಪ್ರಾರ್ಥನೆ, ದುವಾ ನೆರವೇರಿಸಿದರು.ಜಾಮೀಯ ಮಸೀದಿ ಅಧ್ಯಕ್ಷ ನಾಸೀರ್, ಮುಖಂಡರಾದ ಅಬು ಮಹಮ್ಮದ್, ಹಾರೋನ್ ಸಾಹೇಬ್, ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ನೇತೃತ್ವ ಮೆರವಣಿಗೆ ಸಾಗಿತ್ತು.
Comments are closed.