ಕರಾವಳಿ

ತಾಯಿಯ ನೋಡಲು ಬಿಗಿ ಭದ್ರತೆಯಲ್ಲಿ ಉಡುಪಿಗೆ ಬಂದಿರುವ ಡಾನ್ ಬನ್ನಂಜೆ ರಾಜಾ

Pinterest LinkedIn Tumblr

ಉಡುಪಿ: ಪೊಲೀಸ್ ಬಿಗಿ ಭದ್ರತೆಯಲ್ಲಿ ಒಂದು ದಿನದ ಮಟ್ಟಿಗೆ ಅನಾರೋಗ್ಯವುಳ್ಳ ತಾಯಿಯನ್ನು ನೋಡಲು ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜಾ ಉಡುಪಿಗೆ ಬಂದಿದ್ದಾನೆ.

ಬೆಳಗಾವಿ ಹಿಂದಲಗಾ ಜೈಲಿನಲ್ಲಿದ್ದ ಬನ್ನಂಜೆ ರಾಜಾ ತನ್ನ ತಾಯಿ ಅನಾರೋಗ್ಯದಲ್ಲಿದ್ದು ಅವರನ್ನು ನೋಡುವ ಬಗ್ಗೆ ನ್ಯಾಯಾಲಯದಲ್ಲಿ ವಿನಂತಿಸಿದ್ದು ಅದನ್ನು ಪುರಸ್ಕರಿಸಿದ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಪರೋಲ್ ಮೇಲೆ ಇದಕ್ಕೆ ಸಮ್ಮಿತಿ ನೀಡಿತ್ತು. ಅಂತೆಯೇ ಉಡುಪಿ ಮಲ್ಪೆಯ ಕಲ್ಮಾಡಿಯಲ್ಲಿರುವ ನಿವಾಸದಲ್ಲಿರುವ ಅನಾರೋಗ್ಯವುಳ್ಳ ತಾಯಿಯನ್ನು ನೋಡಲು ಸೋಮವಾರ ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆ ತನಕ ಅವಕಾಶ ಮಾಡಿಕೊಡಲಾಗಿದೆ ಎನ್ನಲಾಗಿದೆ. ಸದ್ಯ ಬನ್ನಂಜೆಯನ್ನು ಉಡುಪಿಗೆ ಕರೆತಂದಿದ್ದು ನಗರ ಠಾಣೆಯಲ್ಲಿರಸಲಾಗಿದೆ. ಬೆಳಿಗ್ಗೆಯಿಂದ ನಾಳೆ ಸಂಜೆತನಕ ತಾಯಿಯೊಂದಿಗೆ ಇರಲು ವ್ಯವಸ್ಥೆ ಕಲ್ಪಿಸಿ ಬಳಿಕ ಮತ್ತೆ ಠಾಣೆಗೆ ಕರೆತಮ್ದು ಮಂಗಳವಾರ ಪುನಃ ಬೆಳಗಾವಿ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಭೂಗತ ಪಾತಕಿ ಬನ್ನಂಜೆ ರಾಜಾನನ್ನು 2015ರ ಫೆಬ್ರವರಿ 10ರಂದು ಸೌತ್ ಆಫ್ರಿಕಾದ ಮೊರೆಕ್ಕಾದಲ್ಲಿ ಬಂಧಿಸಲಾಗಿತ್ತು. ಸುಮಾರು 15 ಪ್ರಕರಣಗಳನ್ನು ಉಲ್ಲೇಖಿಸಿ ಮೊರೆಕ್ಕೋದಿಂದ ಬಂಧಿಸಿ ಉಡುಪಿಗೆ ಕರೆ ತರಲಾಗಿತ್ತು. ಸದ್ಯ ಹಿಂಡಲಗಾ ಜೈಲಿನಲ್ಲಿರುವ ಬನ್ನಂಜೆ ರಾಜಾನ ವಿಚಾರಣೆ ವಿಡೀಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿದೆ. ಕೊಲೆ, ದರೋಡೆ, ಶೂಟೌಟ್ ಸೇರಿದಂತೆ ಹಲವು ಪ್ರಕರಣಗಳು ಬನ್ನಂಜೆ ಮೇಲಿದೆ.

(ಯೋಗೀಶ್ ಕುಂಭಾಸಿ)

Comments are closed.