ಕರಾವಳಿ

ಫುಡ್ ಪಾಯಿಸನ್ ಅಥವಾ ಫುಡ್ ಗೆ ಪಾಯಿಸನ್? ಶಿರೂರು ಶ್ರೀಗಳ ಸಾವಿನ‌ ಸುತ್ತ: ಕೆ.ಎಂ.ಸಿ ವೈದ್ಯರು ಬಿಚ್ಚಿಟ್ಟ ಸ್ಪೋಟಕ ಮಾಹಿತಿಯೇನು?

Pinterest LinkedIn Tumblr

ಉಡುಪಿ: ಮೂರ್ನಾಲ್ಕು ದಿನಗಳ ಹಿಂದೆ ಭಕ್ತರೊಂದಿಗೆ ವನಮಹೋತ್ಸವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಸ್ವಾಮೀಜಿ ಇಂದು ರಕ್ತ ವಾಂತಿ‌ಮಾಡಿ ಸತ್ತಿದ್ದಾರೆ ಅಂದ್ರೆ ಅವರ ಭಕ್ತರಿಗೆ ನಂಬಲು ಸಾಧ್ಯವಾಗ್ತನೇ‌ ಇಲ್ಲ.ಮೂಲ ಶಿರೂರು‌ಮಠದಲ್ಲಿ ಶನಿವಾರದಂದು ಮುಖ್ಯಪ್ರಾಣನ ಪೂಜೆಗೈಯ್ದು ಭಕ್ತರಿಗೆ ಪ್ರಸಾದ ಹಂಚಿದಾಗ ಸ್ವಾಮೀಜಿ ಲವಲವಿಕೆ ನೋಡಿದ್ರೆ ಇನ್ನೂ ನೂರು ವರ್ಷ ಬಾಳೋ ಚೈತನ್ಯ ಅವರಲ್ಲಿ‌ಕಂಡು ಬಂದಿತ್ತಂತೆ.

ಆದರೆ ಇಂದು ಬೆಳಿಗ್ಗೆ ಕೇಳಿಬಂದ ಶೀರೂರು ಶ್ರೀಗಳ ಸಾವಿನ ಸುದ್ದಿ ನಿಜವಾಗಲೂ ಶ್ರೀಗಳ ಭಕ್ತರ ಎದೆ ಬಡಿದ ನಿಲ್ಲಿಸುವಂತಿತ್ತು.ಗಟ್ಟಿಮುಟ್ಟಾಗಿದ್ದ ಸ್ವಾಮೀಜಿ ಇದ್ದಕ್ಕಿದ್ದಂತೆ ರಕ್ತ ವಾಂತಿ‌ಮಾಡಿ ಸಾಯಲು ಕಾರಣವೇನು..? ಫುಡ್ ಪಾಯಿಸನ್ ಆಗಿದ್ದು ಹೇಗೆ ಅನ್ನೊ‌ ಪ್ರಶ್ನೆಗಳು ಸಂಶಯಗಳು ಭಕ್ತರ ವಲಯದಿಂದ ಕೇಳಿ ಬರ್ತಾ ಇದೆ.

ನಿನ್ನೆ ದಿನ‌ ಶಿರೂರು ಶ್ರೀಗಳು ತನ್ನ‌ಪಟ್ಟದ ದೇವರನ್ನ ವಾಪಸ್ ಕೊಡುವಂತೆ ಕೋರ್ಟ್ ಮೆಟ್ಟಿಲೇರಬೇಕಿತ್ತು. ಇದಕ್ಕಾಗಿ ಎಲ್ಲಾ ತಯಾರಿಗಳು ನಡೆದಿತ್ತು. ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರ ಮುಖಾಂತರ ಉಡುಪಿಯ ಆರು ಮಠಗಳ ಶ್ರೀಗಳ ವಿರುದ್ದ ಕ್ರಿಮಿನಲ್ ದಾವೆ ಹೂಡಲು ಶೀರೂರು ಶ್ರೀ ಯೋಜನೆ ರೂಪಿಸಿದ್ದರು. ಆದ್ರೆ ದುರಂತವೆಂದ್ರೆ ಕೋರ್ಟ್ ಹೋಗಬೇಕಾದವರು‌ ಮಸಣ ಸೇರಿದ್ದಾರೆ .

ಪುಡ್ ಗೆ ಫಾಯಿಸನ್?

ಹಾಗದ್ರೆ ಫುಡ್ ಪಾಯಿಸನ್ ಅಗಿದ್ಯಾ ಅಥವಾ ಫುಡ್ ಗೆ ಪಾಯಿಸನ್ ಹಾಕಿದ್ದಾರಾ..ಅನ್ನೊ ಸಂಶಯ ಮತ್ತೆ ಗಟ್ಟಿಯಾಗ್ತಿದೆ. ಇದಕ್ಕೆ ಪೂರಕವಾಗಿ ಕೆ.ಎಂಸಿ ವೈದ್ಯರು ನೀಡಿದ ಹೇಳಿಕೆ ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿದೆ. ಶ್ರೀಗಳ ದೇಹದಲ್ಲಿ ವಿಷ ಪದಾರ್ಥ ಸೇರಿರುವ ಸಾಧ್ಯತೆಯಿದ್ದು ಇದರಿಂದಲೇ ಅಂಗಾಗಳು ನಿಷ್ಕ್ರೀಯಗೊಂಡು ಶ್ರೀಗಳು ಮೃತಪಟ್ಟಿರಬಹುದು, ಮರಣೋತ್ತರ ಪರೀಕ್ಷೆ ಬಳಿಕ ಇದು ತಿಳಿಯಲಿದೆ ಎಂದು ವೈದ್ಯರು ಸದ್ಯ ಹೇಳಿದ್ದಾರೆ. ಅದರಂತೆಯೇ ಶ್ರೀಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಸ್ವಾಮೀಜಿಗಳಿಗೆ ಇದ್ದಿತ್ತು ಬೆದರಿಕೆ..

ಕಳೆದ ಕೆಲವು ತಿಂಗಳ ಹಿಂದೆ ಅಷ್ಟ ಮಠಗಳ ಸ್ವಾಮೀಜಿಗಳ ಚರಿತ್ರೆ ಅಲ್ಪ ಸ್ವಲ್ಪ ಮಾಧ್ಯಮದ ಮುಂದೆ ಹೊರ ಹಾಕಿದ ಶಿರೂರು ಶ್ರೀಗಳಿಗೆ ಅಂದೇ ಜೀವ ಬೆದರಿಕೆ ಇತ್ತು.ಅದ್ರೆ ಅದ್ಯಾವದಕ್ಕೂ..ಕ್ಯಾರೆ ಅನ್ನದ ಸ್ವಾಮೀಜಿಯನ್ನ ಮುಟ್ಟೊದಕ್ಕೂ ಸಾಧ್ಯ ಇಲ್ಲ ಅಂತಾ ಅರಿತಾಗ, ಇವರನ್ನ ಅಷ್ಟ ಮಠದಿಂದಲೇ ಹೊರ ಹಾಕುವ ಪ್ಲಾನ್ ನಡೆದಿತ್ತು.

ರಾತೋರಾತ್ರಿ ಮಠಾಧೀಶರುಗಳು ಗುಪ್ತ ಸಭೆ ನಡೆಸಿದ್ರು ಅದರಂತೆ ನಡೆದ ಪ್ಲಾನ್ ಇರಬಹುದಾ ಪುಡ್ ಪಾಯಿಸನ್ ಅನ್ನೊ ಸಂಶಯ ಶಿರೂರು ಶ್ರೀಗಳ ಸಾವಿನಿಂದ ಬಲವಾಗ್ತಾ ಇದೆ. ಶಿರೂರು ಶ್ರೀ ಶಿಷ್ಯ ಸ್ವೀಕಾರ ಮಾಡುವಂತೆಯೂ‌ ಮಠ ಬಿಟ್ಟು ಹೋಗುವಂತೆಯೂ ಷರತ್ತುಗಳನ್ನು‌ ಕೂಡ ಹಾಕಿದ್ದು ಇದಕ್ಕೆ ಒಪ್ಪದ ಶಿರೂರು ನನಗೆ ವಯಸ್ಸಾಗಿಲ್ಲ ಹೀಗಾಗಿ ಸಮಯ ಬಂದಾಗ ಶಿಷ್ಯ ಸ್ವೀಕಾರ ‌ಮಾಡ್ತೇನೆ ಅನ್ನೊ‌ ಖಡಕ್ ಉತ್ತರ ‌ನೀಡಿದ್ದರು. ಹೀಗಾಗಿ ಅಷ್ಟಮಠಾಧೀಶರ ಮಾಸ್ಟರ್ ಪ್ಲಾನ್ ಠುಸ್ ಆಗಿತ್ತು.

ಪ್ಲಾನ್ ಪ್ಲಾಪ್ ಆಯ್ತಾ?

ಮಧ್ವ ಸಂಪ್ರದಾಯದ ಪ್ರಕಾರ ಸ್ವಾಮಿಜಿ ಮೃತಪಟ್ಟರೇ ಮರಣೋತ್ತರ ಪರೀಕ್ಷೆ ನಡೆಸಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡು ಕೊಲ್ಲುವ ಉದ್ದೇಶದಿಂದಲೇ ವಿಷಪ್ರಾಶನ ಮಾಡಲಾಗಿದೆಯೆಂಬ ಮಾತುಗಳು ಕೇಳಿಬರುತ್ತಿದೆ.

ಸದ್ಯ ಮಣಿಪಾಲ‌ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ಸತ್ಯಾಸತ್ಯತೆಗಳು ಇನ್ನಷ್ಟೆ ಹೊರಬೀಳಬೇಕಿದೆ.

ಲಕ್ಷಾಂತರ ಮಂದಿ ಭಕ್ತರವರ್ಗವನ್ನು ಹೊಂದಿರುವ ಶಿರೂರು ಶ್ರೀಗಳು ಎಲ್ಲರಿಗೂ ತುಂಬಾ ಪ್ರೀತಿ ಪಾತ್ರರೂ ಶ್ರೀಗಳ ಸಾವಿನ ಬಗ್ಗೆ ಭಕ್ತರಿಗೆ ಸಹಜವಾಗಿಯೇ ಸಂಶಯ ಇದೆ.

Comments are closed.