ಮಂಗಳೂರು ಜುಲೈ 28: ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣವು ಜುಲೈ 27 ರಾತ್ರಿ ಮತ್ತು 28ರಂದು ರಾತ್ರಿ ಮುಂಜಾನೆ ಯವರೆಗೆ ಸಂಭವಿಸಿದ್ದು, ಜುಲೈ 27ರ ರಾತ್ರಿ 11.54ಕ್ಕೆ ಚಂದ್ರಗ್ರಹಣವು ಆರಂಭಗೊಂಡಿದೆ. ಮಧ್ಯರಾತ್ರಿ 1 ಗಂಟೆಯಿಂದ 2.43ರವರೆಗೆ ಸಂಪೂರ್ಣ ಗ್ರಹಣ ಗೋಚರಿಸಿದ್ದು, ಮುಂಜಾನೆ 3.49ಕ್ಕೆ ಗ್ರಹಣ ಬಿಟ್ಟಿದೆ. ಈ ವೇಳೆ ಮಂಗಳೂರಿನಲ್ಲಿ ಹಂತ ಹಂತವಾಗಿ ಚಂದ್ರ ಕಂಡು ಬಂದ ದೃಶ್ಯ ಕ್ಯಾಮರ ಕಣ್ಣಿಗೆ ಸೆರೆಯಾದದ್ದು ಹೀಗೆ.
ಶತಮಾನದ ಅತೀ ದೀರ್ಘ ಚಂದ್ರ ಗ್ರಹಣ ಇದಾಗಿದ್ದು, ಇದನ್ನು ವರ್ಷದ ಎರಡನೇ ಅತಿ ದೊಡ್ಡ ಗ್ರಹಣ ಎಂದು ಪರಿಗಣಿಸಲಾಗಿದೆ. ಇದೇ ದಿನವೇ ಗುರುಪೂರ್ಣಿಮೆ ಬಂದಿರುವುದು ವಿಶೇಷ. ಈ ಚಂದ್ರಗ್ರಹಣವು ಶತಮಾನದ ಅತೀ ದೀರ್ಘ ಚಂದ್ರಗ್ರಹಣವೆಂದು ಹೇಳಲಾಗುತ್ತಿದ್ದು,ಈ ವೇಳೆ ಬ್ಲಡ್ ಮೂನ್ ಕಾಣಿಸಿಕೊಂಡಿದೆ. ಇದು ತುಂಬಾ ಅಪರೂಪದ ವಿದ್ಯಮಾನ.ಭೂಮಿಯ ವಾತಾವರಣದಲ್ಲಿ ಹಾದುಹೋಗುವ ಸೂರ್ಯನ ಕಿರಣಗಳ ಚದುರುವಿಕೆಯಿಂದ ಚಂದ್ರನು ರಕ್ತವರ್ಣದಲ್ಲಿ ಕಂಡುಬರುತ್ತಾನೆ.
ಮಂಗಳೂರಿನ ಹೊರವಲಯದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಲ್ಲಿ ರಾತ್ತಿ 11.30 ರಿಂದ 3.30ರ ವರೆಗೆ ಈ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ದೂರದರ್ಶಕ ಮತ್ತು ದುರ್ಬೀನುಗಳ ವ್ಯವಸ್ಥೆ ಮಾಡಲಾಗಿತ್ತು.
Comments are closed.