ಉಡುಪಿ: ಅನಾರೋಗ್ಯಕ್ಕೀಡಾಗಿ ಮಣಿಪಾಲ ಆಸ್ಪತ್ರೆಗೆ ಸೇರಿ ಜುಲೈ 19ರಂದು ವಿಧಿವಶರಾದ ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಶ್ರೀಗಳ ಅಸಹಜ ಸಾವಿನ ನಿಸ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಾಟ್ಸಾಪ್, ಪೇಸ್ಬುಕ್ ಮೊದಲಾದ ಸಾಮಾಜಿಕ ಜಾಲತಾಣದಲ್ಲಿ ಶ್ರೀಗಳ ಅಭಿಮಾನಿಗಳು, ಭಕ್ತರು ‘ಜಸ್ಟಿಸ್ ಪಾರ್ ಶೀರೂರು ಸ್ವಾಮಿ’ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಈ ಮೂಲಕವಾಗಿ ಶ್ರೀಗಳ ಪರವಾಗಿ ಅವರ ಅಭಿಮಾನಿಗಳು ತನಿಖೆಗೆ ಒತ್ತಡ ಹಾಕುತ್ತಿದ್ದಾರೆ. ಒಂದೊಮ್ಮೆ ನ್ಯಾಯ ಸಿಗದಿದ್ದಲ್ಲಿ ಮುಂದಿನ ನಡೆಯ ಬಗ್ಗೆಯೂ ಚರ್ಚೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.
ಮುಂದುವರಿದ ತನಿಖೆ…
ಶೀರೂರು ಶ್ರೀ ಶೀರೂರು ಶ್ರೀಗಳ ನಿಗೂಡ ಸಾವಿನ ತನಿಖೆಯನ್ನು ಬೇದಿಸಲು ಪೋಲಿಸರು ವಿಧಿ ವಿಜ್ಞಾನ ಪ್ರಯೋಗಲಾಯದ ಅಂತಿಮ ವರದಿಯನ್ನು ಕಾಯುತ್ತಿದ್ದಾರೆ. ಇನ್ನೂ ಕೂಡ ಪ್ರಾಥಮಿಕ ಮರಣೋತ್ತರ ವರದಿಯೂ ಕೂಡ ಪೊಲೀಸರಿಗೆ ಸಿಕ್ಕಿಲ್ಲ ಎನ್ನಲಾಗುತ್ತಿದ್ದು ಇಂದು ಅಥವಾ ನಾಳೆ ವರದಿ ಕೈ ಸೇರುವ ಸಾಧ್ಯತೆಗಳಿದೆ. ಮೂಲದ ಪ್ರಕಾರ ಇನ್ನೂ ೩ ಅಥಾವ ನಾಲ್ಕು ದಿನಗಳಲ್ಲಿ ಎಪ್.ಎಸ್.ಎಲ್ ವರದಿ ಬರುವ ಸಾದ್ಯತೆಗಳಿವೆ. ಎಫ್.ಎಸ್.ಎಲ್ ವರದಿ ಬಂದ ಬಳಿಕ ೨ ವರದಿಗಳನ್ನು ತಾಳೆ ಮಾಡಲಾಗುತ್ತಿದೆ. ಈ ಎರಡು ಪರೀಕ್ಷಾ ವರದಿಯಲ್ಲಿ ಏನು ವರದಿ ಬರುತ್ತೇ ಆ ವರದಿಯ ಮೂಲಕ ಶ್ರೀಗಳ ಸಾವಿನ ತನಿಖೆ ಮುಂದುವರಿಯಲಿದೆ. ಒಂದೊಮ್ಮೆ ವರದಿಯಲ್ಲಿ ಶ್ರೀಗಳ ಸಾವು ವಿಶಪ್ರಾಶನದಿಂದ ಆಗಿದ್ದಾದರೆ ಪೋಲಿಸರು ಶ್ರೀಗಳಿಗೆ ವಿಷ ಪ್ರಾಶನ ಆಗಿರುವುದು ಹೇಗೆ ಹಾಗೂ ಯಾಕೆ ಯಾರು ಕಾರಣ ಎಂಬ ಆಯಾಮದಲ್ಲಿ ಮತ್ತೆ ತನಿಖೆ ನಡೆಸಬೇಕಿದೆ.
ಸದ್ಯ ಶ್ರೀಗಳ ನಿಗೂಡ ಸಾವಿನ ವಿಚಾರದಲ್ಲಿ ಶ್ರೀಗಳ ಆಪ್ತರೆನಿಸಿರುವ ರಮ್ಯಾ ಶೆಟ್ಟಿ, ಅಂಗರಕ್ಷಕ ಜಗ್ಗ ಯಾನೇ ಜಗದೀಶ , ಬಾಡಿಗೆ ಕಾರು ಚಾಲಕ ಇಕ್ಬಾಲ್ ಸೇರಿದಂತೆ ಪ್ರಕರಣದಲ್ಲಿ ತಳುಕುವ ಹಾಕಿರುವವರನ್ನು ತನಿಖಾ ತಂಡ ರಹಸ್ಯವಾಗಿ ವಿಚಾರಣೆ ನಡೆಸಿದೆ. ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ರಮ್ಯಾ ಶೆಟ್ಟಿ ಹಾಗೂ ಇತರರು ಭಾಗಿಯಾಗಿರುವುದು ಸಾಬೀತಾಗಿಲ್ಲ ಎಂದು ಉನ್ನತ್ತ ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.
ಆರಾಧನೆಗಿಲ್ಲ ಅವಕಾಶ…
ಈ ಮದ್ಯೆ ಶಿರೂರು ಶ್ರೀಗಳ ಆರಾದನ ಪ್ರಕ್ರಿಯೆಗೆ ಅವಕಾಶ ನೀಡುವಂತೆ ಸೋದೆ ಮಠ ಜಿಲ್ಲಾ ಪೋಲಿಸ್ ವರಿಷ್ಢಾಧಿಕಾರಿಗೆ ಮನವಿ ಮಾಡಿದೆ. ಆದ್ರೆ ಶ್ರೀಗಳ ನಿಗೂಡ ರಹಸ್ಯ ಇನ್ನೂ ಬೇದಿಸದ ಕಾರಣಕ್ಕಾಗಿ ಹಾಗೂಮೂಲ ಮಠದ ಒಳಗೆ ಪ್ರಕರಣಕ್ಕೆ ಸಹಕಾರಿಯಾಗುವ ಕೆಲವೊಂದು ಸ್ಯಾಕ್ಷಿಗಳು ಇರುವ ಕಾರಣ ಆರಾಧನ ಕ್ರಿಯೆಗೆ ಅವಕಾಶ ನೀಡಿಲ್ಲ.
ಒಟ್ಟಿನಲ್ಲಿ ಎಪ್ ಎಸ್ ಎಲ್ ವರದಿ ಪೋಲಿಸರ ಕೈ ಸೇರಿದ ಬಳಿಕವೇ ಶ್ರೀಗಳ ನಿಗೂಡ ಸಾವಿನ ರಹಸ್ಯ ಬಯಲಾಗಲು ಸಾಧ್ಯವಾಗಿದ್ದು ಎಲ್ಲರ ಚಿತ್ತ ವರದಿಯತ್ತ ನೆಟ್ಟಿದೆ.
Comments are closed.