ಪ್ರಮುಖ ವರದಿಗಳು

ಡಾ.ಬಿ.ಆರ್.ಶೆಟ್ಟಿ ನಿರ್ಮಾಣದ ಭಾರತದ ಅತಿದೊಡ್ಡ ಚಿತ್ರ ‘ರಂಡಾಮೂರಂ’ಗೆ 2019ರ ಜುಲೈ‌ನಲ್ಲಿ ಚಾಲನೆ‌

Pinterest LinkedIn Tumblr

ಭೀಮನ ದೃಷ್ಟಿಕೋನದಿಂದ ‘ಮಹಾಭಾರತ’ ಹೇಳುವ ಕತೆ ‘ರಂಡಾಮೂರಂ.’ ಭೀಮನಾಗಿ ಮೋಹನ್‌ಲಾಲ್‌ ನಟಿಸುತ್ತಿದ್ದು, ಇತರ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ನಡೆದಿದೆ. 2019ರ ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕ ಬಿ ಆರ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಭಾರತದ ಅತಿ ದೊಡ್ಡ ಬಜೆಟ್‌ ಸಿನಿಮಾ ಎನ್ನಲಾಗಿರುವ ‘ರಂಡಾಮೂರಂ’ ಬಹುಭಾಷಾ ಚಿತ್ರ 2019ರ ಜುಲೈನಲ್ಲಿ ಚಿತ್ರೀಕರಣ ಆರಂಭಿಸಲಿದೆ. ಮಲಯಾಳಂನ ಜನಪ್ರಿಯ ಚಿತ್ರಸಾಹಿತಿ ಎಂ ಟಿ ವಾಸುದೇವನ್‌ ನಾಯರ್‌ ಚಿತ್ರಕತೆ ರಚಿಸುತ್ತಿರುವ ಈ ಚಿತ್ರವನ್ನು ವಿ ಎ ಶ್ರೀಕುಮಾರ್‌ ನಿರ್ದೇಶಿಸಲಿದ್ದಾರೆ. ನಿರ್ಮಾಪಕ ಬಿ ಆರ್ ಶೆಟ್ಟಿ, “ಏಷ್ಯಾದ ಅತಿದೊಡ್ಡ ಸಿನಿಮಾ ‘ರಂಡಾಮೂಗಂ’ಗಾಗಿ 2009ರ ಜುಲೈನಲ್ಲಿ ಶೂಟಿಂಗ್ ಆರಂಭವಾಗಲಿದೆ. ಈ ಕುರಿತು ಮಾತುಕತೆ ನಡೆದಿವೆ,” ಎಂದು ಟ್ವೀಟ್‌ ಮಾಡಿದ್ದಾರೆ.ಭೀಮನ ದೃಷ್ಟಿಕೋನದಲ್ಲಿ ‘ಮಹಾಭಾರತ’ವನ್ನು ನಿರೂಪಿಸುವ ಕತೆಯಿದು. ಮಲಯಾಳಂ ಸ್ಟಾರ್‌ ನಟ ಮೋಹನ್‌ಲಾಲ್‌ ಭೀಮನ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದ ಇತರ ಪಾತ್ರಗಳಿಗೆ ಕಲಾವಿದರ ಆಯ್ಕೆ ಇನ್ನೂ ಆಗಿಲ್ಲ. ಚಿತ್ರದಲ್ಲಿ ದಕ್ಷಿಣ ಭಾರತ, ಬಾಲಿವುಡ್‌ ಮಾತ್ರವಲ್ಲ, ಅಂತಾರಾಷ್ಟ್ರೀಯ ಚಿತ್ರತಾರೆಯರೂ ನಟಿಸಲಿದ್ದಾರೆ ಎಂದು ನಿರ್ಮಾಣ ಸಂಸ್ಥೆಯ ಮೂಲಗಳು ಹೇಳುತ್ತವೆ. ಪ್ರಿಪ್ರೊಡಕ್ಷನ್‌ ಕೆಲಸಗಳು ಬಿರುಸಾಗಿ ನಡೆದಿದ್ದು, ತಂತ್ರಜ್ಞರ ಕುರಿತು ಚರ್ಚೆಯಾಗುತ್ತಿದೆ.

ಈ ಚಿತ್ರಕ್ಕೆ ಹಾಲಿವುಡ್‌ ತಂತ್ರಜ್ಞ ಪೀಟರ್‌ ಹೇನ್‌ ಸಾಹಸ ಸಂಯೋಜಿಸಲಿದ್ದಾರೆ. ಇಂಗ್ಲಿಷ್‌, ಹಿಂದಿ, ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆ. ಭಾರತದ ಇತರ ಪ್ರಾದೇಷಿಕ ಭಾಷೆಗಳು ಹಾಗೂ ಜಗತ್ತಿನ ಪ್ರಮುಖ ಭಾಷೆಗಳಿಗೆ ಚಿತ್ರವನ್ನು ಡಬ್ ಮಾಡುವುದು ನಿರ್ಮಾಪಕರ ಯೋಜನೆ. ನಿರ್ದೇಶಕ ವಿ ಎ ಶ್ರೀಕುಮಾರ್ ಸದ್ಯ ಮೋಹನ್‌ಲಾಲ್‌ ಅವರ ‘ಓಡಿಯಾನ್’ ‌ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾ ಇದೇ ವರ್ಷ ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ.
(ದಿ ಸ್ಟೇಟ್ )

Comments are closed.