ಮಂಗಳೂರು, ಆಗಸ್ಟ್.15:ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬುಧವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 72ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಧ್ವಜಾರೋಹಣಗೈದು ಸ್ವಾತಂತ್ರ್ಯ ಸಂದೇಶ ನೀಡಿದರು.
ಸ್ವಾತಂತ್ರ್ಯ ದಿನಾಚರಣೆಯ ಈ ಸಂಭ್ರಮದಲ್ಲಿ ದೇಶದ ಐಕ್ಯತೆ ಮತ್ತು ಪ್ರಗತಿಗೆ ಮಾರಕವಾದ ದುಷ್ಟ ಶಕ್ತಿಗಳನ್ನು ಎದುರಿಸಲು ದೃಢ ಸಂಕಲ್ಪಮಾಡಬೇಕು. ದೇಶದ ಗಡಿ ಕಾಯವ ವೀರ ಸೇನಾನಿಗಳನ್ನು ನೆನಪಿಸುವುದರೊಂದಿಗೆ ಜಾತಿ, ಮತ ಬೇಧಗಳನ್ನು ಮರೆತು ಸರ್ವರನ್ನು ಪ್ರೀತಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮಾತ್, ಮೇಯರ್ ಭಾಸ್ಕರ್ ಕೆ, ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಜಿಲ್ಲಾ ಎಸ್ಪಿ, ಜಿಲ್ಲಾ ಪಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಮ್ ಆರ್.ರವಿ ಮತ್ತಿತ್ತರರು ಉಪಸ್ಥಿತರಿದ್ದರು.
ವಿಶೇಷ ಪೊಲೀಸ್ ಗಾಯನ ಹಾಗೂ ವಾದ್ಯ ವೃಂದದೊಂದಿಗೆ ತುಕಡಿಗಳ ಪಥಸಂಚಲ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಹೆಚ್ಚಿನ ವಿವರ ನಿರೀಕ್ಷಿಸಿ..
Comments are closed.