ಕರಾವಳಿ

ಕುಂದಾಪುರ(ಕಾಳಾವರ): ರಸ್ತೆಗೆ ಅಡ್ಡ ಬಂದ ಹಾವು; ಕಾರು ಹರಿದು ಬೈಕ್ ಸವಾರ ಸಾವು

Pinterest LinkedIn Tumblr

ಕುಂದಾಪುರ: ರಸ್ತೆಯಲ್ಲಿ ಅಡ್ಡ ಬಂದ ಹಾವನ್ನು ಕಂಡ ಕಾರಿನ ಚಾಲಕ ಬ್ರೇಕ್ ಹಾಕಿದ್ದು ಎದುರಿನಿಂದ ಬಂದ ಇನ್ನೊಂದು ಕಾರು ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಕೋಟೇಶ್ವರ-ಹಾಲಾಡಿ ರಸ್ತೆಯ ಕಾಳಾವರ ಎಂಬಲ್ಲಿ ನಡೆದಿದೆ.

ಹಾಲಾಡಿ ನಿವಾಸಿ ಗ್ಯಾರೇಜ್ ಮಾಲಕ ರುದ್ರ ಆಚಾರ್ ಎನ್ನುವರ ಪುತ್ರ ಗಂಗಾಧರ ಆಚಾರ್ (36) ಮೃತ ದುರ್ದೈವಿ.

ಗಂಗಾಧರ್ ಅವರು ಕೋಟೇಶ್ವರ ಮಾರ್ಗವಾಗಿ ಹಾಲಾಡಿಯತ್ತ ಸಾಗುತ್ತಿದ್ದ ವೇಳೆ ಹಾವೊಂದು ಅಡ್ಡ ಬಂದ ಹಿನ್ನೆಲೆ ಎದುರಿಗಿದ್ದ ಈರ್ಟಿಗಾ ಕಾರಿನ ಚಾಲಕ ಸಡನ್ ಆಗಿ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಹಿಂಬದಿಯಿದ್ದ ಕಾರು ಚಾಲಕ ಬೈಕನ್ನು ಬಲಬದಿಗೆ ಚಲಾಯಿಸಿದ್ದು ಎದುರಿನಿಂದ ವೇಗವಾಗಿ ಬಂದ ಆಲ್ಟೋ ಕಾರು ಬೈಕಿಗೆ ಡಿಕ್ಕಿ ಹೊಡೆದಿದ್ದು ರಸ್ತೆಗೆಸೆಯಲ್ಪಟ್ಟ ಗಂಗಾಧಾರ್ ಮೇಲೆ ಕಾರು ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆನ್ನಲಾಗಿದೆ. ಮೃತ ಗಂಗಾಧರ್ ವಿವಾಹಿತರಾಗಿದ್ದಾರೆ.

ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.