ತಿರುವನಂತಪುರಂ: ಖ್ಯಾತ ಸಂಗೀತ ಸಂಯೋಜಕ, ಗಾಯಕ ಬಾಲಭಾಸ್ಕರ್ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಲಭಾಸ್ಕರ್ ಹಾಗೂ ಪತ್ನಿಯ ಸ್ಥಿತಿ ಚಿಂತಾಜನಕವಾಗಿದ್ದು, 2 ವರ್ಷದ ಮುದ್ದಾದ ಮಗು ದುರ್ಮರಣ ಹೊಂದಿದೆ.
ತಿರುವನಂತಪುರಂನ ಪಳ್ಳಿಪುರಂನಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಾಲಭಾಸ್ಕರ್ ಹಾಗೂ ಪತ್ನಿ ಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು 2 ವರ್ಷದ ಮಗಳು ತೇಜಸ್ವಿನಿ ಸ್ಥಳದಲ್ಲೇ ಮೃತಪಟ್ಟಿದೆ.
ತ್ರಿಸೂರ್ ನಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ ಎಂದು ಮಂಗಳಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬಾಲಭಾಸ್ಕರ್ 12 ವರ್ಷದ ಬಾಲಕನಿಂದಲು ವೇದಿಕೆಗಳ ಮೇಲೆ ಹಾಡುತ್ತಿದ್ದರು. ಇನ್ನು 17 ವರ್ಷಕ್ಕೆ ಮಲಯಾಳಂನ ಮಾಂಗಲ್ಯ ಪಲ್ಲಕ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಅತೀ ಚಿಕ್ಕ ವಯಸ್ಸಿಗೆ ಸಂಗೀತ ಸಂಯೋಜಿಸಿದ ಖ್ಯಾತಿಗೆ ಅವರು ಭಾಜನರಾಗಿದ್ದರು.
Comments are closed.