ಕರಾವಳಿ

ಕರಾವಳಿಯಲ್ಲಿ ಹಿಂಗಾರು ಮಳೆಯ ಅರ್ಭಟ : ಗುಡುಗು ಸಹಿತ ಧಾರಾಕರ ಮಳೆಗೆ ತತ್ತರಿಸಿದ ಜನತೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್. 04: ಕಳೆದ ಮೂರು ದಿನಗಳಿಂದ ದ.ಕ ಜಿಲ್ಲೆಯ ಹಲವೆಡೆ ಸಂಜೆ ಹೊತ್ತು ಮಳೆ ಸುರಿಯುತ್ತಿದ್ದು, ಇಂದು ಸಂಜೆ ವೇಳೆ ಕರಾವಳಿಯ ವಿವಿಧೆಡೆ ಗುಡುಗು ಸಹಿತ ಧಾರಾಕರ ಮಳೆ ಸುರಿಯುವ ಮೂಲಕ ಹಿಂಗಾರು ಮಳೆಯ ಅರ್ಭಟ ಮತ್ತೆ ಆರಂಭವಾಗಿದೆ.

ಗುರುವಾರ ಸಂಜೆ ಗುಡುಗು ಮಿಂಚು ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆ ಸುರಿದಿದ್ದು, ಮಳೆ ಬಗ್ಗೆ ಯಾವೂದೇ ಪೂರ್ವ ತಯಾರಿ ಇಲ್ಲದೇ ಕೆಲಸ ಕಾರ್ಯಗಳಿಗೆ ತೆರಳಿದಂತ ನಾಗರೀಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. . ಗಂಟೆಗೂ ಅಧಿಕ ಸಮಯ ಮಳೆ ಜೊತೆ ಗಾಳಿ ಅಬ್ಬರಿಸಿದ್ದು, ಜಿಲ್ಲೆಯ ಕೆಲವು ಕಡೆಗಳಲ್ಲಿ ಸೊತ್ತು ನಷ್ಟ ಉಂಟಾದ ಬಗ್ಗೆ ವರದಿಯಾಗಿದೆ.

ಅ. 6ರಿಂದ 8ರವರೆಗೆ ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗುವ ಸಂಭವವಿರುವುದರಿಂದ ಎಲ್ಲ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಬಾರದು. ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರಿಕೆ ದೋಣಿಗಳು ಅ. 5ರೊಳಗೆ ದಡ ಸೇರುವಂತೆ ಈ ಮೂಲಕ ಎಲ್ಲ ಮೀನುಗಾರರಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಈ ಸಂದೇಶವನ್ನು ಮೀನುಗಾರಿಕೆ ಸಂಘದ ಅಧ್ಯಕ್ಷರು ಎಲ್ಲ ಮೀನುಗಾರರಿಗೆ ರವಾನಿಸಿದ್ದಾರೆ. ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ 700ಕ್ಕೂ ಹೆಚ್ಚು ಬೋಟ್ ಗಳು ಶುಕ್ರವಾರ ದಡಕ್ಕೆ ವಾಪಸಾಗಿವೆ. ಬಂದರ್ ಹಾಗೂ ಹಾರ್ಬರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ

Comments are closed.