ಕರಾವಳಿ

ಶಬರಿಮಲೆ ವಿವಾದಾತ್ಮಕ ತೀರ್ಪಿನ ವಿರುದ್ಧ ಚರ್ಚಿಸಲು ಮಂಗಳೂರಿನಲ್ಲಿ ಇಂದು ಸಂಜೆ ಪೂವ ಭಾವಿ ಸಭೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್,06 : ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿ ಈಗಾಗಲೇ ಕೇರಳದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರಿಂದ ಬ್ರಹತ್ ಪ್ರತಿಭಟನೆ ನಡೆದಿದ್ದರೂ ಕೇರಳ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಯಾವ ರೀತಿ ಹೋರಾಟ ಮಾಡಬಹುದು ಎಂಬುವುದರ ಬಗ್ಗೆ ಚರ್ಚಿಸಲು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಇಂದು (ಶನಿವಾರ) ಸಂಜೆ 4 ಘಂಟೆಗೆ ನಗರದ ಸಂಘನಿಕೇತನದಲ್ಲಿ ಪೂರ್ವ ಭಾವಿ ಸಭೆ ಆಯೋಜಿಸಲಾಗಿದೆ.

ಈ ಪೂರ್ವ ಭಾವಿ ಮಂಗಳೂರಿನ ಅಯ್ಯಪ್ಪ ಸ್ವಾಮಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಯಾವ ರೀತಿ ಹೋರಾಟ ಮಾಡಬಹುದು ಎಂಬುವುದರ ಬಗ್ಗೆ ಚರ್ಚಿಸಲಿದ್ದಾರೆ. ಅಯ್ಯಪ್ಪ ಸ್ವಾಮಿ ಭಕ್ತರು ಕೇರಳದಲ್ಲಿ ಮಾತ್ರವಲ್ಲ ದೇಶದ ಮೂಲೆ ಮೂಲೆಯಲ್ಲೂ ಇದ್ದಾರೆ. ಪ್ರತಿಯೊಂದು ಭಾಗದ ಅಯ್ಯಪ್ಪ ಸ್ವಾಮಿ ಭಕ್ತರು ಒಟ್ಟಾಗಿ ಈ ಹೋರಾಟದಲ್ಲಿ ಯಾವ ರೀತಿಯಲ್ಲಿ ಭಾಗಿಯಾಗಬೇಕು ಎಂಬುವುದರ ಬಗ್ಗೆ ಕೂಡ ಸಭೆಯಲ್ಲಿ ಚರ್ಚಿಸಲಾಗುವುದು.

ಊರಿನ ಪ್ರತಿಯೊಬ್ಬ ಅಯ್ಯಪ್ಪಸ್ವಾಮಿ ಭಕ್ತರು ತಪ್ಪದೇ ಈ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ, ಮಂದಿನ ಹೋರಾಟದ ರೂಪುರೇಷೆ ತಯಾರಿಸಲು ಸಲಹೆ ಸೂಚನೆಗಳನ್ನು ನೀಡಬೇಕೆಂದು ಮಂಗಳೂರು ಮಹಾನಗರದ ಅಯ್ಯಪ್ಪ ಸೇವಾ ಸಮಿತಿಯ ಮುಖ್ಯಸ್ಥರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.

Comments are closed.