ಕರಾವಳಿ

ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆಗೈದ ಪತ್ನಿ ; ಗಂಜಿಮಠ ಸಮೀರ್ ಕೊಲೆ ಆರೋಪಿಗಳ ಸೆರೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.08: ಗಂಜಿಮಠ ನಿವಾಸಿ ಮುಹಮ್ಮದ್ ಸಮೀರ್ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ದೇವತಾನಪಟ್ಟಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಮೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್‌ ಪತ್ನಿ ಫಿರ್ದೌಸ್ ಮತ್ತಾಕೆಯ ಪ್ರಿಯಕರನನ್ನು ಪೊಲೀಸರು ಬೆಂಗಳೂರು-ತಮಿಳುನಾಡು ಗಡಿ ಪ್ರದೇಶವಾದ ಹೊಸೂರು ಠಾಣೆ ವ್ಯಾಪ್ತಿಯ ಹೊಸೂರು ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಳಿಕ ಕೋರ್ಟ್‌ಗೆ ಹಾಜಾರು ಪಡಿಸಿದ್ದು, ಕೋರ್ಟ್ ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ದೇವತಾನಪಟ್ಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಖಚಿತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿಗಳು, ಸಮೀರ್‌ನನ್ನು ಸೆ.15ರಂದು ರಾತ್ರಿ 11 ಗಂಟೆಯ ಸುಮಾರಿಗೆ ಚಾಕುವಿನಿಂದ ತಿವಿದು ಕೊಲೆಗೈಯಲಾಗಿದೆ. ಬಳಿಕ ಮೃತದೇಹವನ್ನು ಕೊಡೈಕೆನಾಲ್‌ನಲ್ಲಿ ಬಿಸಾಡಿದ ಬಗ್ಗೆ ಒಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಫಿರ್ದೌಸ್, ಮತ್ತಾಕೆಯ ಪ್ರಿಯಕರ ಆಸಿಫ್ ನನ್ನು ವಶಕ್ಕೆ ಪಡೆದ ಹೊಸೂರು ಠಾಣೆಯ ಪೊಲೀಸರು ಗೌಪ್ಯ ಸ್ಥಳಕ್ಕೆ ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಬಳಿಕ ಸಮೀರ್ ಮೃತದೇಹ ಪತ್ತೆಯಾಗಿದ್ದ ದೇವತಾನಪಟ್ಟಿ ಠಾಣೆಗೆ ಕರೆದೊಯ್ದು ಮತ್ತೊಂದು ವಿಚಾರಣೆ ಬಳಿಕ ನ್ಯಾಯಾಂಗದ ವಶಕ್ಕೆ ನೀಡಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದ ಯಾವೂದೇ ಮಾಹಿತಿ ಲಭಿಸಿಲ್ಲ : ಸಮೀರ್ ಕುಟುಂಬ

ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳು ಬಳಸಿದ್ದಾರೆನ್ನಲಾದ ಕಾರೊಂದು ಮೂಡುಬಿದಿರೆ ಸಮೀಪ ಪತ್ತೆಯಾಗಿದ್ದು, ಅದನ್ನು ತಮಿಳುನಾಡಿನ ದೇವತಾನಪಟ್ಟಿ ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ‘ಸಮೀರ್ ಕೊಲೆಗೆ ಸಂಬಂಧಿಸಿದ ಡಿಎನ್‌ಎ ವರದಿ, ಮರಣೋತ್ತರ ವರದಿಗಳನ್ನು ಕುಟುಂಬಕ್ಕೆ ನೀಡಿಲ್ಲ. ಕಳೆದ ವಾರ ತಮಿಳುನಾಡಿನ ಪೊಲೀಸರು ಮನೆಗೆ ಬಂದು ಕೆಲ ಮಾಹಿತಿಗಳನ್ನು ಪಡೆದುಕೊಂಡು ಹೋಗಿದ್ದರು. ಮತ್ತೆ ಮೂರು ದಿನಗಳ ಬಳಿಕ ಮಾಹಿತಿಗಾಗಿ ಬರುವುದಾಗಿ ಪೊಲೀಸರು ತಿಳಿಸಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಎಲ್ಲಿಯವರೆಗೆ ಬಂದಿದೆ ಎನ್ನುವ ಮಾಹಿತಿ ಇಲ್ಲ’ ಎಂದು ಮೃತ ಸಮೀರ್ ಕುಟುಂಬದ ಮೂಲಗಳು ತಿಳಿಸಿವೆ.

Comments are closed.