ಕರಾವಳಿ

ಮನೆಯಲ್ಲಿ ವೇಶ್ಯಾವಾಟಿಕೆ; ಡಿಸಿಐಬಿ ಪೊಲೀಸರಿಂದ ಮಹಿಳಾ ಪಿಂಪ್ ಸಹಿತ 7ಮಂದಿ ಸೆರೆ

Pinterest LinkedIn Tumblr

ಕುಂದಾಪುರ: ಮನೆಯಲ್ಲಿ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಮಹಿಳಾ ಪಿಂಪ್ ಸಹಿತ ಏಳು ಮಂದಿಯನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಪೆಜಮಂಗೂರು ಗ್ರಾಮದ ಕೊಕ್ಕರ್ಣೆಯಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಜಗದೀಶ (44), ಹೃದಯ (26), ಶ್ರೀಧರ (25), ಜಯಂತ್ (30), ಮನ್ಸೂರು ಅಹಮ್ಮದ್ (40), ರಾಜೇಶ್ (23) ಹಾಗೂ ಸರಳ ರಾವ್‌(58) ಬಂಧಿತ ಆರೋಪಿಗಳು. ಬಂಧಿತರಿಂದ 9,900ರೂ ನಗದು, ಹಾಗೂ ಮೂರು ಬೈಕ್ ಸ್ವಾಧೀನಪಡಿಸಿಸಕೊಳ್ಳಲಾಗಿದೆ.

ಯುವತಿಯರನ್ನು ಪುಸಲಾಯಿಸಿ ಮನೆಯಲ್ಲಿ ಇರಿಸಿಕೊಂಡು ಈ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಡಿಸಿಐಬಿ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿಯಂತೆ ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ.

ಬ್ರಹ್ಮಾವರ ಪೊಲೀಸ್ ಠಾಣೆ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

Comments are closed.