ಕರಾವಳಿ

ಮಂಗಳೂರಿನಲ್ಲಿ ಎಫ್‌ಬಿಬಿ ‘ಫ್ಯಾಶನ್ ಶೋ’ : ಖ್ಯಾತ ರೂಪದರ್ಶಿಗಳ ಜೊತೆ ಹೆಜ್ಜೆ ಹಾಕಿದ ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ

Pinterest LinkedIn Tumblr

ಮಂಗಳೂರು, ಅಕ್ಟೋಬರ್.22: ನಗರದ ಫ್ಯಾಶನ್ ಬಿಗ್ ಬಝಾರ್ (ಎಫ್‌ಬಿಬಿ) ಹಮ್ಮಿಕೊಂಡಿರುವ “ಫೆಸ್ಟಿವಲ್ ಕಲೆಕ್ಷನ್‌” ವಿಶೇಷ ಉಡುಪುಗಳ ಸಂಗ್ರಹ ಪ್ರದರ್ಶನ ಕಾರ್ಯಕ್ರಮದಲ್ಲಿ ಖ್ಯಾತ ರೂಪದರ್ಶಿಗಳಿಂದ ಫ್ಯಾಶನ್ ಬಿಗ್ ಬಝಾರ್‌ನ ಹಬ್ಬಗಳ ಬಟ್ಟೆಗಳ ಅನಾವರಣಗೊಂಡಿತ್ತು.

ರವಿವಾರ ಸಂಜೆ ನಗರದ ಮಾಲ್‌ವೊಂದರಲ್ಲಿ ನಡೆದ ವರ್ಣರಂಜಿತ ‘ಫ್ಯಾಶನ್ ಶೋ’ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಖ್ಯಾತ ರೂಪದರ್ಶಿಗಳು ಭಾರತದ ಉಡುಪುಗಳ ಖ್ಯಾತ ಬ್ರಾಂಡ್ ಎಫ್‌ಬಿಬಿಯ ವಿಶೇಷ ಹಾಗೂ ವಿವಿಧ ವಿನ್ಯಾಸದ ಉಡುಪುಗಳನ್ನು ಧರಿಸಿ ಕ್ಯಾಟ್ ವಾಕ್ ಮಾಡಿದರು.

ಇದೇ ಸಂದರ್ಭದಲ್ಲಿ ಎಫ್‌ಬಿಬಿ ಹಬ್ಬದ ಸಂದರ್ಭದಲ್ಲಿ ಹಮ್ಮಿಕೊಂಡ ವಿಶೇಷ ಉಡುಪುಗಳ ಸಂಗ್ರಹ ಪ್ರದರ್ಶನಕ್ಕೆ ಚಾಲನೆ ನೀಡಿದ ಖ್ಯಾತ ಚಲನಚಿತ್ರ ನಿರ್ದೇಶಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಲನಚಿತ್ರ ಖ್ಯಾತಿಯ ರಿಷಬ್ ಶೆಟ್ಟಿ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಕಲಾವಿದ ಮಕ್ಕಳ ಜೊತೆ ತಾವೂ ಕೂಡ ‘ಫ್ಯಾಶನ್ ಶೋ’ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕುವ ಮೂಲಕ ಅಚ್ಚರಿ ಮೂಡಿಸಿದರು.

ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಿಷಬ್ ಶೆಟ್ಟಿ ಅವರು, ಕನ್ನಡ ಶಾಲೆಗಳು ಉಳಿಯಬೇಕು ಎನ್ನುವ ಆಶಯದೊಂದಿಗೆ ನಿರ್ಮಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಲನಚಿತ್ರಕ್ಕೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತು 75 ದಿನ ಪ್ರದರ್ಶನ ಕಾಣುವಂತಾಗಿದೆ. ಕನ್ನಡಿಗರ ಅಭೂತಪೂರ್ವ ಪ್ರೋತ್ಸಾಹಕ್ಕೆ ಅಭಾರಿಯಾಗಿದ್ದೇನೆ ಎಂದು ಹೇಳಿದರು.

ಭಾರತದ ಉಡುಪುಗಳ ಖ್ಯಾತ ಬ್ರಾಂಡ್ ಎಫ್‌ಬಿಬಿ ಬಗ್ಗೆ ಮಾತನಾಡಿದ ಅವರು, ಎಫ್‌ಬಿಬಿ ತಮ್ಮ ಅಚ್ಚುಮೆಚ್ಚಿನ ಬ್ರಾಂಡ್ ಎಂದು ಬಣ್ಣಿಸಿದರಲ್ಲದೇ ಮಕ್ಕಳು, ಪುರುಷರು, ಮಹಿಳೆಯರಿಗೆ ಸೇರಿದಂತೆ ಎಲ್ಲರಿಗೂ ಬೇಕಾದ ಉಡುಪುಗಳನ್ನು ಹೊಂದಿರುವ ಎಫ್‌ಬಿಬಿ ಮಳಿಗೆಯನ್ನು ಬೆಂಬಲಿಸಿ ಎಂದು ರಿಷಬ್ ಶೆಟ್ಟಿ ಶುಭ ಹಾರೈಸಿದರು.

ಇದೇ ವೇಳೆ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹಾಡು ಮತ್ತು ನೃತ್ಯ (ಡ್ಯಾನ್ಸ್) ಮಾಡುವ ಅವಕಾಶವನ್ನು ಸಂಘಟಕರು ಕಲ್ಪಿಸಿದ್ದರು. ಹಲವಾರು ಮಂದಿ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಬಿಗ್ ಬಝಾರ್ ಎಫ್‌ಬಿಬಿ ಮಳಿಗೆಯ ಸ್ಟೋರ್ ಮ್ಯಾನೇಜರ್‌ಗಳಾದ ಮಾರನ್ ಹಾಗೂ ಶಿವಕುಮಾರ್ ಅವರು ರಿಷಬ್ ಶೆಟ್ಟಿ ಹಾಗೂ ಅವರ ಚಿತ್ರ ತಂಡವನ್ನು ಸ್ವಾಗತಿಸಿದರು. ದೇಶಾದ್ಯಂತ ಇರುವ ಎಫ್‌ಬಿಬಿ ಮತ್ತು ಬಿಗ್ ಬಝಾರ್ ಮಳಿಗೆಗಳಲ್ಲಿ ಈ ವಿಶೇಷ ಸಂಗ್ರಹ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದುಈ ವೇಳೆ ಅವರು ತಿಳಿಸಿದರು.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್ (Mob: 9035089084)

Comments are closed.