ಕರಾವಳಿ

ಪೂಜಾರಿಯವರಿಗೆ ದೈವ ಪ್ರೇರಣೆ : ಮಹಾ ಶಿವರಾತ್ರಿಯಂದು ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ನೂತನ ಧ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

Pinterest LinkedIn Tumblr

ಮಂಗಳೂರು : ದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ತುಳು ನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಹುಟ್ಟೂರಾದ ಪಡುಮಲೆಯಿಂದ ತಂದಿರುವ ಕೊಡಿ (ಸಾಗುವಾನಿ ) ಮರವನ್ನು ಧಾರ್ಮಿಕ ವಿಧಿ ವಿಧಾನಗಳಿಂದ ಪೂಜಿಸಿದ ಕೇಂದ್ರದ ಮಾಜಿ ಸಚಿವ ಹಾಗೂ ಶ್ರೀಕ್ಷೇತ್ರ ಕುದ್ರೋಳಿಯ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಆರತಿ ಬೆಳಗಿ ಬಾವುಕರಾಗಿ ವಂದಿಸಿದರು.

ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೂಜಾರಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿರುವ 105 ವರ್ಷಗಳ ಹಿಂದಿನ ದೇವಸ್ಥಾನದ ಧ್ವಜ ಸ್ತಂಭ(ಕೊಡಿಮರ)ವನ್ನು 1991ರಲ್ಲಿ ದೇವಸ್ಥಾನದ ನವೀಕರಣದ ಸಂದರ್ಭದಲ್ಲಿ ಬದಲಾಯಿಸಿರುವುದಿಲ್ಲ. ಸದ್ರಿ ಧ್ವಜ ಸ್ತಂಭ (ಕೊಡಿಮರವನ್ನು) ಬದಲಾಯಿಸ ಬೇಕು ಎನ್ನುವುದು ನನಗೆ ದೈವ ಸಂಕಲ್ಪದಿಂದ ಬಂದಿರುವ ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಈ ಬಾರಿಯ ವರ್ಷಾವಧಿ ಉತ್ಸವ ನಡೆಯುವ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ನೂತನ ಧ್ವಜ ಸ್ತಂಭವನ್ನು ಪ್ರತಿಷ್ಠಾಪಿಸಲಾಗುವುದು. ಈ ಬಾರಿಯ ದೇವಸ್ಥಾನದ ಉತ್ಸವ ಶ್ರೀಕ್ಷೇತ್ರದಲ್ಲಿ ಫೆ.27ರಿಂದ ಮಾರ್ಚ್ 2019ರವರೆಗೆ ನಡೆಯಲಿದೆ. ಜಾತಿ, ಮತ ಭೇದವಿಲ್ಲದೆ ಈ ಉತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ನೂತನ ಧ್ವಜ ಸ್ತಂಭವನ್ನು (ಕೊಡಿ ಮರ) ಸ್ಥಾಪಿಸಲಾಗುವುದು ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಕುದ್ರೋಳಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್,(ಎಡ್ವಕೇಟ್), ಶ್ರೀ ಕ್ಷೇತ್ರದ ಅಬಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಡಾ.ಬಿ.ಜೆ.ಸುವರ್ಣ, ಡಾ.ಅನಸೂಯ ಬಿ.ಟಿ, ಹರಿಶ್ಚಂದ್ರ, ಲೋಹಿತಾಕ್ಷ, ಜಯ ವಿಕ್ರಮ, ಡಿ.ಡಿ.ಕಟ್ಟೆಮಾರ್, ದೇವೇಂದ್ರ ಪೂಜಾರಿ, ಶೇಖರ ಪೂಜಾರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.