ಬಳ್ಳಾರಿ: ಉಪ ಚುನಾವಣೆಯ ಕಾವು ಅಂತಿಮ ಘಟ್ಟ ತಲುಪುತ್ತಿದ್ದಂತೇ ಮತ್ತಷ್ಟು ಹೆಚ್ಚುತ್ತಿದೆ. ಅದರಲ್ಲೂ ಗಣಿನಾಡು ಬಳ್ಳಾರಿಯಲ್ಲಿ ಉಪ ಚುನಾವಣೆಯ ಕಾವು ತುಸು ಹೆಚ್ಚಾಗಿಯೇ ಇದೆ.
ಗಣಿಧಣಿಗಳ ಭದ್ರಕೋಟೆ ಬಳ್ಳಾರಿಯಲ್ಲಿ ಕಮಲ-ಕೈ ನಾಯಕರ ಪರಸ್ಪರ ಮಾತಿನ ಸಮರ ಮಿತಿ ಮೀರಿದೆ. ಇಷ್ಟು ದಿನ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ನಾಯಕ ಜನಾರ್ಧನ್ ರೆಡ್ಡಿ ನಡುವೆ ನಡೆಯುತ್ತಿದ್ದ ಟಾಕ್ ವಾರ್ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರತ್ತಲೂ ತಿರುಗಿದೆ.
ಬಳ್ಳಾರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಿದ ರೆಡ್ಡಿ, ಸಿದ್ದರಾಮಯ್ಯ ಮಾಡಿದ ಪಾಪದ ಫಲವಾಗಿ ದೇವರು ಅವರ ಮಗನನ್ನು ಕಿತ್ತುಕೊಂಡ ಎಂದು ಹೇಳಿಕೆ ನೀಡಿದ್ದಾರೆ.
ಇದಕ್ಕೆ ಸೌಮ್ಯವಾಗಿ ಆದರೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನೀವು ಮಾಡಿದ ಪಾಪಕ್ಕೆ ದೇವರು ನಿಮ್ಮ ಮಕ್ಕಳನ್ನು ಕಸಿಯದಿರಲಿ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜಕೀಯ ಲಾಭಕ್ಕಾಗಿ ನನ್ನ ಮಗನ ಸಾವನ್ನು ಬಳಸಿಕೊಂಡಿದ್ದೀರಿ. ಆದರೆ ನೀವು ಮಾಡಿದ ಪಾಪಕ್ಕೆ ದೇವರು ನಿಮ್ಮ ಮಕ್ಕಳಿಗೆ ಶಿಕ್ಷೆ ನೀಡದಿರಲಿ ಎಂಬುದೇ ನನ್ನ ಆಶಯ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
Comments are closed.