ಕರಾವಳಿ

ನಾಳೆ ಮಂಗಳೂರಿನಲ್ಲಿ ಬ್ಯಾರೀಸ್ ವೆಲ್‍ಫೇರ್ ಫೋರಂ ಅಶ್ರಯದಲ್ಲಿ 14 ಜೋಡಿಗಳಿಗೆ ಸಾಮೂಹಿಕ ವಿವಾಹ

Pinterest LinkedIn Tumblr

ಮಂಗಳೂರು, ಫೆಬ್ರವರಿ.15 : ಬ್ಯಾರಿ ಸಮುದಾಯದ ಅನಾಥ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿರುವ ಕುಟುಂಬದ ಹೆಣ್ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಬುಧಾಬಿಯ ಬ್ಯಾರೀಸ್ ವೆಲ್‍ಫೇರ್ ಫೋರಂ (ಬಿಡಬ್ಲ್ಯುಎಫ್) ತನ್ನ 7ನೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಫೆ. 16ರಂದು ಬೆಳಿಗ್ಗೆ ಗಂ. 11.00ಕ್ಕೆ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ ಎಂದು ಬ್ಯಾರೀಸ್ ವೆಲ್‍ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಮಾರಂಭದಲ್ಲಿ ಆಯ್ದ 14 ಜೋಡಿಗಳಿಗೆ ವಿವಾಹ ನಡೆಯಲಿದ್ದು, ಮಂಗಳೂರು ಖಾಝಿ ಅಲ್‍ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ಕಾರ್ಯಕ್ರಮದ ನೇತ್ರತ್ವ ವಹಿಸಲಿದ್ದಾರೆ. ನಗರಾಭಿವೃದ್ದಿ ಸಚಿವ ಯು.ಟಿ. ಖಾದರ್ ಸಮಾರಂಭ ಉದ್ಘಾಟಿಸಲಿದ್ದಾರೆ. ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಅಧ್ಯಕ್ಷತೆ ವಹಿಸಲಿದ್ದು, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ ಪ್ರಾಸ್ತಾವನೆ ಮಾಡಲಿದ್ದಾರೆ ಎಂದರು.

ಸನ್ಮಾನ ಕಾರ್ಯಕ್ರಮ:

ಸಮಾರಂಭದಲ್ಲಿ ಜೀವಮಾನ ಸಮುದಾಯ ಸೇವೆಗಾಗಿ ತುಂಬೆ ಬಿ.ಎ. ಗ್ರೂಪ್‍ನ ಸ್ಥಾಪಕಾಧ್ಯಕ್ಷ ಡಾ. ಬಿ. ಅಹ್ಮದ್ ಹಾಜಿ ಮೊಹಿದಿನ್ ಮತ್ತು ಇತ್ತೀಚೆಗೆ ಕೊಲಂಬಿಯಾ ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ. ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುವುದು.

ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ. ಮೋನು ಕಣಚೂರು, ಮಾಜಿ ಶಾಸಕ ಬಿ.ಎ. ಮೊೈದಿನ್ ಬಾವ, ರಾಜ್ಯ ವಕ್ಫ್ ಸಲಹಾ ಸಮಿತಿ ಸದಸ್ಯ ಶಾಫಿ ಸಹದಿ, ಕೆನರಾ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ ಅಧ್ಯಕ್ಷ ಎಸ್.ಎಂ. ರಶೀದ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್‍ನ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮುಮ್ತಾಝ್ ಅಲಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕೆ. ಮುಹಮ್ಮದ್ ಮತ್ತು ನಿದಾ ಸೋಶಿಯೊ ಕ್ಯಾರ್ ಫೌಂಡೇಶನ್‍ನ ಅಧ್ಯಕ್ಷ ಮೌಲಾನಾ ವಿ.ಕೆ. ಅಬ್ದುಲ್ ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಭಾರತ್ ಇನ್ಪ್ರಾಸ್ಟ್ರಕ್ಚರ್ಸ್‍ನ ಆಡಳಿತ ನಿರ್ದೇಶಕ ಮುಸ್ತಫಾ ಎಸ್.ಎಂ., ಹಾಸನದ ಜನಪ್ರಿಯ ಆಸ್ಪತ್ರೆಯ ಸ್ಥಾಪಕಾಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ., ಹಾಜಿ ಅಬ್ದುಲ್ಲ ಮೆಮೋರಿಯಲ್ ಟ್ರಸ್ಟ್‍ನ ಸದಸ್ಯ ಸೆಯ್ಯದ್ ಸಿರಾಜ್ ಅಹ್ಮದ್, ವೈಟ್‍ಸ್ಟೋನ್ ಡೆವಲಪರ್ಸ್‍ನ ಆಡಳಿತ ನಿರ್ದೇಶಕ ಬಿ.ಎಂ. ಶರೀಫ್, ಅಬುಧಾಬಿ ಇನ್ವೆಸ್ಟ್‍ಮೆಂಟ್ ಅಥೋರಿಟಿಯ ಫಕ್ರುದ್ದೀನ್ ಭಟ್, ನೂರುಲ್‍ಹುದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬದ್ರುದ್ದೀನ್ ಪಣಂಬೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹಿಮಾನ್, ಆಝಾದ್ ಗ್ರೂಪ್‍ನ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್, ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ, ಕತರ್‍ನ ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ಲ ಮೋನು, ಏಸ್ ಫೌಂಡೇಶನ್‍ನ ಅಧ್ಯಕ್ಷ ಸಾದುದ್ದೀನ್ ಎಂ. ಸಾಲಿಹ್, ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎ.ಎ. ಹೈದರ್ ಪರ್ತಿಪ್ಪಾಡಿ, ತೆಕ್ಕಿಲ್ ರೂರಲ್ ಡೆವಲಪ್‍ಮೆಂಟ್ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ ಟಿ.ಎಂ. ಶಹೀದ್, ಹಿದಾಯ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ ಖಾಸಿಂ ಅಹ್ಮದ್ ಹೆಚ್.ಕೆ., ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ ಯುಎಇ ಘಟಕದ ಅಧ್ಯಕ್ಷ ಎಸ್.ಎಂ. ಬಶೀರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್. ಕರೀಮ್, ಹಾಗೂ ಅಲ್‍ವಫಾ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಮುಹಮ್ಮದ್ ಹನೀಫ್ ಜಿ, ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದು ಮುಹಮ್ಮದ್ ಅಲಿ ಉಚ್ಚಿಲ್ ಕಾರ್ಯಕ್ರಮದ ಸಮಗ್ರ ವಿವರ ನೀಡಿದರು.

ಬ್ಯಾರೀಸ್ ವೆಲ್‍ಫೇರ್ ಫೋರಂ 2008ರಿಂದ ಮಂಗಳೂರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ಹಿಂದೆ ಒಟ್ಟು 100 ಜೋಡಿಗಳ ಮದುವೆ ನೆರವೇರಿಸಿದೆ. ಜಿಲ್ಲೆಯ ಸುಮಾರು ನೂರ ಐವತ್ತಕ್ಕೂ ಹೆಚ್ಚು ಕುಟುಂಬಗಳು ಕಳೆದ ನಾಲ್ಕು ವರ್ಷಗಳಲ್ಲಿ ‘ಬಿಡಬ್ಲ್ಯುಎಫ್ ಶೌಚಾಲಯ ನಿರ್ಮಾಣ ಯೋಜನೆ’ಯ ಪ್ರಯೋಜನ ಪಡೆದಿವೆ.

ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ರಫೀಕ್ ಕೃಷ್ಣಾಪುರ (ಉಪಾಧ್ಯಕ್ಷ, ಬ್ಯಾರೀಸ್ ವೆಲ್‍ಫೇರ್ ಫೋರಂ, ಅಬುಧಾಬಿ), ಇಮ್ರಾನ್ ಅಹ್ಮದ್ ಕುದ್ರೋಳಿ (ಸಂಯೋಜಕ, ಬ್ಯಾರೀಸ್ ವೆಲ್‍ಫೇರ್ ಫೋರಂ, ಅಬುಧಾಬಿ), ಬಶೀರ್ ಬಜ್ಪೆ (ಮುಖ್ಯ ಸಲಹೆಗಾರ, ಬ್ಯಾರೀಸ್ ವೆಲ್‍ಫೇರ್ ಫೋರಂ, ಅಬುಧಾಬಿ), ಹನೀಫ್ ಉಳ್ಳಾಲ್ (ಸಲಹೆಗಾರ, ಬ್ಯಾರೀಸ್ ವೆಲ್‍ಫೇರ್ ಫೋರಂ, ಅಬುಧಾಬಿ), ಉಮರ್ ಯು.ಹೆಚ್. (ಸಂಚಾಲಕ, ಬಿಡಬ್ಲ್ಯುಎಫ್ ಸಾಮೂಹಿಕ ವಿವಾಹ ಸಂಘಟನಾ ಸಮಿತಿ), ನಝೀರ್ ಉಬಾರ್ ( ಕಾರ್ಯಕಾರಿ ಸಮಿತಿ ಸದಸ್ಯ) ಮುಂತಾದವರು ಉಪಸ್ಥಿತರಿದ್ದರು.

Comments are closed.