ಕರಾವಳಿ

ಲಿಕ್ಕರ್ ಪಾರ್ಟಿಗಳಿಗೆ ಅಬಕಾರಿ ಲೈಸನ್ಸ್ ಕಡ್ಡಾಯ : ಕಾಯಿದೆ ಉಲ್ಲಂಘಿಸಿದರೆ ಕಠಿಣ ಕ್ರಮ

Pinterest LinkedIn Tumblr

 

 

 

ಮಂಗಳೂರು : ಸಾರ್ವಜನಿಕ ಪ್ರದೇಶದಲ್ಲಿ ಸಾರ್ವಜನಿಕರು ಅನಧಿಕೃತ ಮದ್ಯ ದಾಸ್ತಾನು, ಮಾರಾಟ ಮಾಡುವುದು ಹಾಗೂ ಸೇವಿಸುವುದು ಅಬಕಾರಿ ಕಾಯಿದೆಯಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಅಕ್ರಮಗಳು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ರೀತಿ ಸಭಾಂಗಣ, ಹಾಲ್ ಇತ್ಯಾದಿಗಳಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಅಬಕಾರಿ ಇಲಾಖೆಯಿಂದ ಸಿಎಲ್-5 ಸನ್ನದನ್ನು ಹೊಂದದೇ ಮದ್ಯ ಸೇವನೆಗೆ ಅವಕಾಶ ಕಲ್ಪಿಸುವುದು ಅಪರಾಧವಾಗಿರುತ್ತದೆ.

ಇಂತಹ ಯಾವುದೇ ಘಟನೆಗಳು ಇಲಾಖೆಯ ಗಮನಕ್ಕೆ ಬಂದಲ್ಲಿ ಸಂಬಂಧಪಟ್ಟ ಸಭಾಂಗಣ/ಹಾಲ್‍ಗಳ ಮಾಲಿಕರ ವಿರುದ್ಧ ಅಬಕಾರಿ ಕಾಯಿದೆಯಡಿ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ.

Comments are closed.