ಮಂಗಳೂರು : ಕಳೆದೆರಡು ದಿನಗಳಿಂದ ಅಬ್ಬಕ್ಕ ಉತ್ಸವದ ಪೂರ್ವಭಾವಿಯಾಗಿ ಉಳ್ಳಾಲದ ಅನುದಾನಿತ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲೆಯಾದ್ಯಂತದಿಂದ ಪಾಲ್ಗೊಂಡ 29 ಚಿತ್ರಕಲಾ ಶಿಕ್ಷಕರು ವೀರರಾಣಿ ಅಬ್ಬಕ್ಕನ ಚರಿತೆಯನ್ನು ತಮ್ಮ ಕುಂಚಗಳಿಂದ ಜನಮಾನಸಕ್ಕೆ ತಲುಪಿಸುವಂತೆ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತಿಯೊಬ್ಬ ಚಿತ್ರಕಲಾ ಶಿಕ್ಷಕರಿಗೂ ಪ್ರತ್ಯೇಕ ವಿಷಯಗಳನ್ನು ನೀಡಲಾಗಿದ್ದು, ರಾಣಿ ಅಬ್ಬಕ್ಕನ ಜೀವನ ಚರಿತೆಯ ಪುಟಗಳು ಚಿತ್ರಗಳ ಮೂಲಕ ನೋಡುಗರ ಮನಸೆಳೆಯುತ್ತಿದೆ. ಕುಂಬಳೆಯ ಅರಸು ಅಬ್ಬಕ್ಕನ ಭೇಟಿಗೆ ಬರುವ ಚಿತ್ರ, ಅಳಿಯ ಕಾಮರಾಯ ಮತ್ತು ಚಂದಯ್ಯ ಸೆಟ್ಟಿಯ ಗೂಢಾಲೋಚನೆ, ರಾಣಿ ಅಬ್ಬಕ್ಕನ ಸೇನಾಧಿಪತಿಯ ಮರಣ ಹಾಗೂ ಸೇನಾಧಿಪತಿಯ ಮಡದಿಯ ಸತಿ ಸಹಗಮನ, ಅವರ ವೀರಗಲ್ಲು ಸ್ಥಾಪನೆ, ಮಕ್ಕಳ ಜೊತೆ ಉಳ್ಳಾಲಕ್ಕೆ ಪಯಣ, ಉಳ್ಳಾಲದ ಕಡಲಿಗೆ ಬರುತ್ತಿರುವ ಪೋರ್ಚುಗೀಸರ ನಾವೆಯನ್ನು ತಡೆಯುವ ಚಿತ್ರಗಳು ಸೇರಿದಂತೆ ಹಿರಿಯ ಲೇಖಕರಾದ ಅಮೃತ ಸೋಮೇಶ್ವರರ ಜೊತೆ ಚರ್ಚಿಸಿ ನಡೆಸಿದ ಚಿತ್ರ ರಚನೆಗಳು ಅಬ್ಬಕ್ಕನ ದಿನಾಚರಣೆಯಂದು ಸಾಮಾನ್ಯ ಜನರನ್ನು ತಲುಪುವುದರಲ್ಲಿ ಸಂದೇಹವಿಲ್ಲ.
ವಿದ್ಯಾಂಗ ಉಪನಿರ್ದೇಶಕರಾದ ಶಿವರಾಮಯ್ಯ ಅವರ ಮಾರ್ಗದರ್ಶನದಲಿ,್ಲ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ ಈ ಶಿಬಿರ 2019ರ ಅಬ್ಬಕ್ಕ ಉತ್ಸವಕ್ಕೆ ವಿಶೇಷ ಕಳೆಯನ್ನು ತಂದುಕೊಟ್ಟಿದೆ.
Comments are closed.