ಕುಂದಾಪುರ: ಬೈಂದೂರು ತಾಲೂಕು ಅರೆಹೊಳೆ ಕ್ರಾಸ್ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ-೬೬ ಬಳಿ ಯಾರೋ ಕಿಡಿಗೇಡಿಗಳು ವ್ಯಕ್ತಿಯೊಬ್ಬನ ಕಾಲಿಗೆ ಸರಪಳಿ ಬಿಗಿದು ಅದಕ್ಕೆ ಬೀಗ ಹಾಕಿ ಮರಕ್ಕೆ ಕಟ್ಟಿಹಾಕಿದ್ದು ಶನಿವಾರ ಪರಿಸರದ ಸ್ಥಳೀಯ ನಾಗರಿಕರು ರಕ್ಷಣೆ ಮಾಡಿದ್ದಾರೆ.
ಮಲೆಯಾಳಂ ಮಾತನಾಡುವ ಕೇರಳ ಮೂಲದ ವ್ಯಕ್ತಿ ಸಯ್ಯದ್ ಕೊಯ(50) ಎಂದು ತಿಳಿದುಬಂದಿದೆ.
ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಚಿಕ್ಕ ಗಾತ್ರದ ಮರವೊಂದಕ್ಕೆ ಕಟ್ಟಿ ಹಾಕಿರುವುದನ್ನು ನೋಡಿದ ವಾಹನ ಸವಾರರು ಬೈಂದೂರು ಠಾಣೆಗೆ ಮಾಹಿತಿ ನೀಡಿದ್ದರು.ಕೋಡಲೇ ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ಸಿಬ್ಬಂದಿಗಳು ಸರಪಳಿ ಬಿಡಿಸಲು ಪ್ರಯತ್ನಿಸಿದರಾದರೂ ಬೀಗ ಹಾಕಿದ್ದರಿಂದ ತೆಗೆಯಲು ಸಾಧ್ಯವಾಗಿರಲಿಲ್ಲ. ಬಳಿಕ ಗಿಡ ಮುರಿದು ಸರಪಳಿ ಸಮೇತ ವ್ಯಕ್ತಿ ಕರೆತಂದು ಸಮೀಪದ ವೆಲ್ಡಿಂಗ್ ಅಂಗಡಿಗೆ ಸರಪಳಿ ಕಾಲಿಂದ ತೆಗೆಯಲಾಯಿತು.
ಪೊಲೀಸರ ವಿಚಾರಣೆ ವೇಳೆ ಕೊಲಿಕೊಡ್ ಜಿಲ್ಲೆ ಕಲ್ಲಾಚಿ ನಿವಾಸಿ ಕುನ್ಝಿ ಕೊಯ ಎಂಬವರ ಪುತ್ರ ಎಂದು ಹೇಳಿಕೊಂಡಿದ್ದಾನೆ.
ಇದೀಗ ಬೈಂದೂರು ಪೊಲೀಸರು ಕೇರಳ ಪೊಲೀಸರ ನೆರವು ಕೋರಿದ್ದು ಸಯ್ಯದ್ ಮನೆಗೆ ವಾಪಾಸು ಕಳುಹಿಸುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಸ್ಥಳೀಯರ ಮಾನವೀಯತೆ!
ರಸ್ತೆ ಬದಿಯಲ್ಲಿ ಅಮಾನವೀಯ ರೀತಿಯಲ್ಲಿ ಸರಪಳಿ ಮೂಲಕ ಗಿಡಕ್ಕೆ ಕಟ್ಟಿಹಾಕಿದ ವ್ಯಕ್ತಿಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಶೋಚನೀಯ ಸ್ಥತಿಯಲ್ಲಿ ವ್ಯಕ್ತಿಯಿದ್ದು, ಗಿಡದಿಂದ ವ್ಯಕ್ತಿ ಬಿಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಆಗದೆ ಗಿಡ ಸರವಿ ವ್ಯಕ್ತಿ ಬಿಡಿಸಿದ್ದು, ವೆಲ್ಡಿಂಗ್ ಆಸಪ್‌ನಲ್ಲಿ ಚೈನ್ ಕತ್ತರಿಸಿ ಸರಪಳಿ ಬಿಡಿಲಸಾಗಿದೆ. ನಂತರ ಸ್ಥಳಿಯರು ವ್ಯಕ್ತಿ ಸ್ನಾನ ಮಾಡಿಸಿ ಠಾಣೆ ತಂದು ಬಿಟ್ಟಿದ್ದು, ಹೆಚ್ಚಿನ ಮಾಹಿತಿಗಾಗಿ ಕೇರಳ ರಾಜ್ಯದ ಕೋಯಿಕೋಡ್ ಠಾಣೆ ಸಂಪರ್ಕಿಸಲಾಗಿದೆ.
Comments are closed.