ಕುಂದಾಪುರ: ವ್ಯಕ್ತಿಯೋರ್ವ ಕತ್ತಿಯಿಂದ ತನ್ನನ್ನು ತಾನು ಕಡಿದುಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಕುಂದಾಪುರ ನಗರದ ರಾಮಮಂದಿರ ರಸ್ತೆಯಲ್ಲಿ ನಡೆದಿದೆ.
ಕೊಪ್ಪಳ ಮೂಲದ ಸುಮಾರು 40 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಭಾನುವಾರ ಮದ್ಯಾಹ್ನದ ಸುಮಾರಿಗೆ ಕತ್ತಯಿಂದ ಕುತ್ತಿಗೆ ಭಾಗಕ್ಕೆ ಕಡಿದುಕೊಳ್ಳುತ್ತಿದ್ದ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಕುಂದಾಪುರ ಠಾಣೆಯ ಎ.ಎಸ್.ಐ. ಪಾಂಡುರಙಗ ನಾಯ್ಕ, ಸುಧಾಕರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ವ್ಯಕ್ತಿಯನ್ನು ಕರೆದೊಯ್ದು ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ವ್ಯಕ್ತಿಯ ಗುರುತು ಮತ್ತೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ. ಒಂದು ಕೈಯಲ್ಲಿ ಅಮ್ಮ ಎಂದು ಬರೆದುಕೊಂಡಿದ್ದಾನೆ ಎನ್ನಲಾಗಿದೆ.
Comments are closed.