ಮಂಗಳೂರು, ಮಾರ್ಚ್.10: ಮಂಗಳೂರಿನ ಬೋಳೂರು ಸುತಾನ್ ಬತ್ತೇರಿಯ ಮಾತಾ ಅಮೃತಾನಂದಮಯಿ ಮಠದಲ್ಲಿ ಶನಿವಾರ ನಡೆದ ಸತ್ಸಂಗದ ಕಾರ್ಯಕ್ರಮದ ವೇಳೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರು ‘ ಅಮ್ಮ ‘ ಎಂದು ಜನನಿತರಾಗಿರುವ ಮಾತಾ ಅಮೃತಾನಂದಮಯಿ ಅವರ ಆಶೀರ್ವಾದ ಪಡೆದರು.
ಶ್ರೀ ಬ್ರಹ್ಮಸ್ಥಾನ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ ‘ಅಮೃತ ಸಂಗಮ -2019’- ಕಾರ್ಯಕ್ರಮದ ಎರಡನೇ ದಿನವಾದ ಶನಿವಾರ ಸುಲ್ತಾನ್‌ಬತ್ತೇರಿಯ ಅಮೃತ ವಿದ್ಯಾಲಯಂ ಮೈದಾನದಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅಮ್ಮ ಪ್ರವಚನ ನೀಡಿದರು.
ಪರೋಪಕಾರ, ಪ್ರಕೃತಿ ಧರ್ಮ ಪಾಲಿಸುವ ಮೂಲಕ ಜೀವನದಲ್ಲಿ ನೆಮ್ಮದಿ ಹೊಂದಬಹುದು. ಪ್ರಕೃತಿ ಯಾವಾಗಲೂ ಮಾನವನ ಪರ. ಆದರೆ, ಅತಿಬಳಕೆ, ಮಾಲಿನ್ಯ ಮತ್ತು ನಾಶದಿಂದ ಪ್ರಕೃತಿ ಮುನಿಯುತ್ತದೆ. ಪ್ರಕೃತಿಯ ಬಗ್ಗೆ ಗೌರವಾದರ ಇದ್ದಲ್ಲಿ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳಬಹುದು.ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅಮ್ಮ ಹೇಳಿದರು.
ಮರಗಿಡಗಳು ಮನುಷ್ಯನಿಂದ ಏನನ್ನೂ ಪಡೆಯದೇ ಮಾನವ ಕುಲಕ್ಕೆ ಉಪಕಾರಿಯಾಗಿವೆ. ಆದರೆ, ಇಂದು ವಾಹನಗಳ ಹೊಗೆ, ಕಾರ್ಖಾನೆ ತ್ಯಾಜ್ಯ, ರಾಸಾಯನಿಕ ಗೊಬ್ಬರ ಬಳಕೆಯಿಂದ ಪ್ರಕೃತಿ ಕಲುಷಿತಗೊಂಡಿದೆ ಎಂದು ಅಮ್ಮ ಬೇಸರ ವ್ಯಕ್ತಪಡಿಸಿಸಿದರು.
ಅಮೃತ ಸಂಗಮ ದ್ವಿತೀಯ ದಿನದ ಕಾರ್ಯಕ್ರಮದಲ್ಲಿ ಆಗಮಿಸಿದ ಗಣ್ಯರು.ಅಮ್ಮನವರಿಗೆ ಪುಷ್ಪ ಮಾಲೆಯೊಂದಿಗೆ ಗೌರವಾರ್ಪಣೆಗೈದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಹಾಗೂ ಸ್ಥಾಯಿ ಸಮಿತಿ ಅಧಕ್ಷೆಯಾಗಿದ್ದ ಶ್ರೀಮತಿ ಲತಾ ಸಾಲ್ಯಾನ್. ನವ ಮಂಗಳೂರು ಬಂದರು ಕಾರ್ಯದರ್ಶಿ ಕರ್ನಲ್ ಬಿಜು ವಾರಿಯರ್,ಶ್ರೀಮತಿ ನಿರ್ಮಲಾ ಕಾಮತ್, ಮಲ್ಪೆಯ ಉದ್ಯಮಿ ಶ್ರೀ ರಮೇಶ್ ಕೋಟ್ಯಾನ್ ಮುಂತಾದವರು ಪಾಲ್ಗೊಂಡಿದ್ದರು.
ಈ ವೇಳೆ ಬೋಳೂರಿನ ಮಾತಾ ಅಮೃತಾನಂದಮಯಿ ಮಠದ ಮಂಗಳಾಮೃತ ಚೈತನ್ಯ, ಸಮಿತಿಯ ಪ್ರಮುಖರಾದ ಡಾ| ಜೀವರಾಜ್ ಸೊರಕೆ, ಡಾ| ಸನತ್ ಹೆಗ್ಡೆ, ಶ್ರುತಿ ಹೆಗ್ಡೆ, ವಾಮನ್ ಕಾಮತ್, ಸಂತೋಷ್ ಅಮೀನ್, ಮಾದವ ಸುವರ್ಣ, ಡಾ. ದೇವದಾಸ್ ಪುತ್ರನ್ ಮುಂತಾದವರು ಉಪಸ್ಥಿತರಿದ್ದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಅಮೀನ್ ವಂದಿಸಿದರು.
Comments are closed.