ಮಂಗಳೂರು : ಬಂಟ್ವಾಳದ ಮೆಲ್ಕಾರ್, ಪಾಣೆ ಮಂಗಳೂರಿನ ಜಿ.ಸಿ.ಪ್ರಸನ್ನ ಕಾಂಪ್ಲೆಕ್ಸ್ನ ಬಂಟ್ವಾಳ ರಿಕ್ರಿಯೇಷನ್ ಕ್ಲಬ್‌ನಲ್ಲಿ ಅನಧಿಕೃತವಾಗಿ ನಗದು ಪಣವಾಗಿಟ್ಟು ಜೂಜಾಡುತ್ತಿದ್ದ 70 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಜೂಜಾಟ ಆಡಲು ಪಣಕಿಟ್ಟಿದ್ದ 72,100 ರೂ. ಹಾಗೂ 1 ಲಕ್ಷ ರೂ. ಮೌಲ್ಯದ 51 ಮೊಬೈಲ್, ಒಂದು ಪೆನ್ನು, 52 ಇಸ್ಪೀಟ್ ಕಾರ್ಡ್, 2 DVRಗಳು, ಒಂದು ರೌಂಡ್ ಟೇಬಲ್, 7 ಚೇರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ರಮವಾಗಿ ಜೂಜಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ನ್ಯಾಯಾಧೀಶರ ಆದೇಶದಂತೆ, ದಾಳಿ ನಡೆಸಿದ ಬಂಟ್ವಾಳ ಎಎಸ್ಪಿ, ಎಸ್ಐ ಮಂಜುನಾಥ್, ಸಂಚಾರ ಠಾಣೆ, ಬಂಟ್ವಾಳ ಹಾಗೂ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಮೆಲ್ಕಾರ್ನಲ್ಲಿರುವ ಬಂಟ್ವಾಳ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿದ್ದಾರೆ.
ಈ ಸಂದರ್ಭ ಕ್ಲಬ್ ನಡೆಸುತ್ತಿದ್ದ ಕಾಸರಗೋಡು, ಮಂಜೇಶ್ವರದ ಮ್ಯಾನೇಜರ್ ಸಾಯಿ ಕಿರಣ್ (37) ರಲ್ಲಿ ಪರವಾನಿಗೆ ಬಗ್ಗೆ ವಿಚಾರಿಸಲಾಗಿತ್ತು. ಆದರೆ ಯಾವುದೇ ಪರವಾನಿಗೆ ಇಲ್ಲದ ಪರಿಣಾಮ, ಉಚ್ಛ ನ್ಯಾಯಾಲಯದ ನಿಯಮಗಳನ್ನು ಉಲ್ಲಂಘಿಸಿ ಜೂಜಾಟ ಆಡುತಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಮ್ಯಾನೇಜರ್ ಸೇರಿ 70 ಜನ ಆರೋಪಿಗಳನ್ನು ವಶಕ್ಕೆ ಪಡೆದು ಬಂಟ್ವಾಳ ನಗರ ಠಾಣಾ ಕರ್ನಾಟಕ ಪೊಲೀಸ್ ಕಾಯ್ದೆ 1963ರಂತೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
Comments are closed.