ಮಂಗಳೂರು ಮಾರ್ಚ್ 21 : ಲೋಕಸಭಾ ಚುನಾವಣೆಗೆ ಭಾರತ ಚುನಾವಣಾ ಆಯೋಗದಿಂದ ಶ್ರೀ ಸುದಿಪ್ತ ಗುಹಾ (ಐಆರ್‍ಎಸ್) ಇವರು ರಾಜಕೀಯ ಪಕ್ಷಗಳ ಖರ್ಚು ವೆಚ್ಚಗಳ ಮೇಲೆ ನಿಗಾ ಇಡುವ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಗೆ ಚುನಾವಣಾ ವೆಚ್ಚ ವೀಕ್ಷಕರಾಗಿ ಆಗಮಿಸಿದ್ದಾರೆ. ಇವರು ಸಕ್ರ್ಯೂಟ್ ಹೌಸ್, ಕದ್ರಿ ಕೊಠಡಿ ಸಂಖ್ಯೆ 4 ರಲ್ಲಿ ಲಭ್ಯವಿದ್ದು, ದೂರುಗಳಿದ್ದಲ್ಲಿ ಮೊಬೈಲ್ ಸಂಖ್ಯೆ: 9480812316 ಸಂಪರ್ಕಿಸಬಹುದು.
ಇವರ ಜೊತೆಗೆ ಸಂಪರ್ಕ ಅಧಿಕಾರಿಯಾಗಿ ಕೆ. ಪ್ರವೀಣ್ ಕುಮಾರ್ 9480158558 ಕರ್ತವ್ಯ ನಿರ್ವಹಿಸಲಿದ್ದು ದೂರು/ಅಹವಾಲುಗಳನ್ನು ಸಲ್ಲಿಸಲು ಇಚ್ಛಿಸುವ ಸಾರ್ವಜನಿಕರು ಮುಂಚಿತವಾಗಿ ಚುನಾವಣಾ ವೀಕ್ಷಕರ ಸಂಪರ್ಕ ಅಧಿಕಾರಿಯವರನ್ನು ಸಂಪರ್ಕಿಸಬಹುದು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂ, ಮೀಡಿಯಾ ಮಾನಿಟರಿಂಗ್ ಸೆಲ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Comments are closed.