ಮಂಗಳೂರು : ಹೋಳಿ ಹಬ್ಬದ ಪ್ರಯುಕ್ತ ಗುರುವಾರ ನಗರದ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ವಿದ್ಯಾರ್ಥಿಗಳು ಪರಸ್ಪರ ಬಣ್ಣ ಹಚ್ಚಿ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು. ವಿದ್ಯಾರ್ಥಿಗಳು ಡಿಜೆ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ, ಪರಸ್ಪರ ಬಣ್ಣ ಹಂಚಿಕೊಂಡು ಶುಭಾಶಯ ಕೋರಿದರು. ಜಾತಿ-ಭೇದ ಮರೆತು ಸಂತಸ ಎಲ್ಲೆಡೆ ಹೊಮ್ಮಿಸುವ ಈ ಹಬ್ಬವನ್ನು ಇಲ್ಲಿನ ದೇಶ -ವಿದೇಶದ ನೂರಾರು ಸಂಖ್ಯೆಯ ಯುವಕ ಯುವತಿಯರು ಒಟ್ಟಿಗೆ ಆಚರಿಸಿದರು.
Comments are closed.