ಕರಾವಳಿ

ಕಿನ್ನಿಗೋಳಿ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈರೋಡ್ ಶೋ ಮೂಲಕ ಮತಯಾಚನೆ

Pinterest LinkedIn Tumblr

ಮಂಗಳೂರು, ಎಪ್ರಿಲ್.10: ದ.ಕ. ಲೋಕಸಭಾಕ್ಷೇತ್ರದ ಕಾಂಗ್ರೆಸ್‌ – ಜೆಡಿ‌ಎಸ್ ಮೈತ್ರಿ ಪಕ್ಷದ‌ ಅಭ್ಯರ್ಥಿ ಎಂ. ಮಿಥುನ್‌ ರೈ‌ ಅವರು ಇಂದು ಕಿನ್ನಿಗೋಳಿ ಪರಿಸರದಲ್ಲಿ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತದಾರರಲ್ಲಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಅಭಯಚಂದ್ರಜೈನ್, ಅಮರನಾಥ್ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧನಂಜಯ್ ಮಟ್ಟು, ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ್‌ಕೋಟ್ಯಾನ್, ಎಪಿ‌ಎಂಸಿ ಆಧ್ಯಕ್ಷ ಪ್ರಮೋದ್‌ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್‌ಅಧ್ಯಕ್ಷೆ ಶಾಲೆಟ್ ಪಿಂಟೋ, ವಸಂತ್ ಬರ್ನಾಡ್‌ ಸೇರಿದಂತೆ ನೂರಾರು ಕಾರ್ಯಕರ್ತರು ಮಿಥುನ್ ರೈಯವರಿಗೆ ಸಾಥ್ ನೀಡಿದರು.

Comments are closed.