ಕರಾವಳಿ

ಬೆಳ್ಮಣ್ ಬಳಿ ಭೀಕರ ರಸ್ತೆ ಅಪಘಾತ : ಬಸ್ ತಲೆ ಮೇಲೆ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Pinterest LinkedIn Tumblr

ಮೂಡಬಿದ್ರೆ, ಮೇ 28: ಎರಡು ಬೈಕ್‌ಗಳ ಮಧ್ಯೆ ಉಂಟಾದ ಅಪಘಾತ ಸಂದರ್ಭ ಬೈಕ್ ಸವಾರನೋರ್ವ ರಸ್ತೆಗೆ ಎಸೆಯಲ್ಪಟ್ಟು ಅತನ ತಲೆ ಮೇಲೆ ಬಸ್ ಹರಿದು ಧಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ಮೂಡಬಿದ್ರೆ – ಪಡುಬಿದ್ರೆ ರಸ್ತೆಯ ಬೆಳ್ಮಣ್ಣು ಜಂಕ್ಷನ್‌ನಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಸೂಡ ನಿವಾಸಿ ದಿನೇಶ ಆಚಾರ್ಯ (36) ಎಂದು ಗುರುತಿಸಲಾಗಿದೆ.

ಮೂಡಬಿದ್ರೆ – ಪಡುಬಿದ್ರೆ ರಸ್ತೆಯ ಬೆಳ್ಮಣ್ಣು ಜಂಕ್ಷನ್‌ನಲ್ಲಿ ಇಂದು ಸಂಜೆ ಎರಡು ಬೈಕ್‌ಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಒಂದು ಬೈಕಿನ ಸವಾರ ದಿನೇಶ್ ಆಚಾರ್ಯ ರಸ್ತೆಗೆ ಎಸೆಯಲ್ಪಟ್ಟಿದ್ದು ಈ ವೇಳೆ ಬರುತ್ತಿದ್ದ ಬಸ್ಸೊಂದು ದಿನೇಶ್ ಆಚಾರ್ಯರ ತಲೆ ಮೇಲೆ ಚಲಿಸಿತೆನ್ನಲಾಗಿದೆ. ಇದರಿಂದ ತಲೆ ಸಂಪೂರ್ಣ ಛಿದ್ರಗೊಂಡಿದ್ದು, ಗಂಭೀರವಾಗಿ ಗಾಯಗೊಂಡ ದಿನೇಶ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ಭೀಕರತೆ ಎಷ್ಠಿತ್ತಂದರೆ ಮೃತರ ತಲೆಯ ಮೇಲೆ ಬಸ್ ಚಲಿಸಿದ್ದರಿಂದ ಮೃತರನ್ನು ಗುರುತು ಹಿಡಿಯಲಾರದಷ್ಟು ತಲೆ ಭಾಗ ಛಿದ್ರವಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.