ಕರಾವಳಿ

ಪಾಶ್ವವಾಯು ಪೀಡಿತ ರೋಗಿಯನ್ನು ತವರಿಗೆ ಕಳುಹಿಸಲು ನೆರವಾದ ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್

Pinterest LinkedIn Tumblr

ರಿಯಾದ್ /ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಲ್ಲೂರು ಮೂಲದ ಅಬ್ದುಲ್ ಮಜೀದ್ ಎಂಬವರು ತೀರಹದಗೆಟ್ಟ ಅನಾರೋಗ್ಯ ಸ್ಥಿತಿಯಲ್ಲಿ ಸೌದಿ ಅರೇಬಿಯಾದ ರಿಯಾದ್ ನ ಅಲ್ ಸುಮೈಶಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅದಕ್ಕೆ ಸ್ಪಂದಿಸಲು ಊರ ಸಹೋದರರ ಆವಶ್ಯಕತೆಯ ಕುರಿತಾಗಿರುವ ಮೆಸೇಜ್ ಬಹಳಷ್ಟು ವೈರಲ್ ಆಗಿತ್ತು. ಇವರ ಅಸಹಾಯಕತೆ ಮತ್ತು ಸೂಕ್ತ ದಾಖಲೆಯ ಕೊರತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯು ಹರಿದಾಡುತ್ತಿದ್ದದ್ದನ್ನು ಮನಗಂಡು ಇಂಡಿಯನ್ ಸೋಶಿಯಲ್ ಫೋರಂ ಇವರಿಗೆ ಸಹಾಯಹಸ್ತ ನೀಡಲು ದಾವಿಸಿತ್ತು. ಪಾಶ್ವವಾಯು ಪೀಡಿತ ಅಬ್ದುಲ್ ಮಜೀದ್ ರವರನ್ನು ಭೇಟಿ ಮಾಡಿದ ಇಂಡಿಯನ್ ಸೋಶಿಯಲ್ ಫೋರಮ್ ರಿಯಾದಿನ ಪ್ರಧಿನಿಧಿಗಳು ಹೆಚ್ಚಿನ ಚಿಕಿತ್ಸೆಗಾಗಿ ಊರಿಗೆ ಕಳುಹಿಸಬೇಕಾದ ಅನಿವಾರ್ಯತೆ ಮನದಟ್ಟು ಮಾಡಿಕೊಂಡರು.

ತುರ್ತಾಗಿ ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ತಂಡವು ಸಹೋದರನ ಸೌದಿ ಪ್ರಾಯೋಜಕರನ್ನು (ಕಫೀಲ್) ಭೇಟಿಯಾಗುವಲ್ಲಿ ಕಾರ್ಯ ಪ್ರವ್ರತ್ತಿಯಾಯಿತು. ಈ ಬಗ್ಗೆ ಪೂರಕವಾಗಿ ಸ್ಪಂದಿಸಿದ ಸೌದಿ ಪ್ರಜೆ (ಕಫೀಲ್) ತಂಡಕ್ಕೆ ಅಗತ್ಯವಾದ ದಾಖಲೆಗಳನ್ನು ಒದಗಿಸಿದರು. ನಂತರ ಸೌದಿ ಅರೇಬಿಯಾದ ಭಾರತೀಯ ದೂತವಾಸ ಕಚೇರಿಯನ್ನು ಸಂಪರ್ಕಿಸಿದ ತಂಡವು ವೀಸಾ ಹಾಗೂ ತುರ್ತು ವೈಟ್ ಪಾಸ್ಪೋರ್ಟ್ ತನ್ನ ಸತತ ಪರಿಶ್ರಮದ ಮೂಲಕ ಪಡಕೊಳ್ಳುವಲ್ಲಿ ಯಶಸ್ವಿಯಾಯಿತು. ದಾನಿಗಳ ಸಹಾಯದಿಂದ ವಿಮಾನಯಾನದ ಟಿಕೆಟ್ ಪಡೆದು ಅಬ್ದುಲ್ ಮಜೀದ್ ಇವರನ್ನು ದಮ್ಮಾಮ್ ನಿಂದ ಮಂಗಳೂರಿಗೆ ಕಳುಹಿಸಲಾಯಿತು.

ಇಂಡಿಯನ್ ಸೋಶಿಯಲ್ ಫಾರಮ್ ತಂಡವು ಅಬ್ದುಲ್ ಮಜೀದ್ ಮಲ್ಲೂರು ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ತೊಂದರೆಗೆ ಸಿಲುಕಿದ ಅನೇಕ ಅನಿವಾಸಿ ಭಾರತೀಯರನ್ನು ಯಶಸ್ವಿಯಾಗಿ ಭಾರತಕ್ಕೆ ತಲುಪಿಲುವಲ್ಲಿ ದಿನ ನಿತ್ಯ ಕಾರ್ಯ ಪ್ರವೃತ ತಂಡವಾಗಿದೆ. ಇವರ ನಿಸ್ವಾರ್ತ ಸೇವೆಯು ಗಲ್ಫ್ ರಾಷ್ಟ್ರಗಳ ಅನಿವಾಸಿ ಭಾರತೀಯರು ಹಾಗು ಅವರ ಕುಟುಂಬದವರ ಬಹಳಷ್ಟು ಪ್ರಶಂಸೆಗೆ ಪಾತ್ರವಾಗಿದೆ.

Comments are closed.