ಮಂಗಳೂರು : ವೇಗಸ್ ಫಿಲಮ್ಸ್ ಲಾಂಛನದಲ್ಲಿ ರೋಶನ್ ವೇಗಸ್ ನಿರ್ಮಿಸುತ್ತಿರುವ ರಾಮ್ ಶೆಟ್ಟಿ ನಿರ್ದೇಶನದ ಏರೆಗಾವುಯೇ ಕಿರಿಕಿರಿ ತುಳು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.
ಏರೆಗಾವುಯೆ ಕಿರಿಕಿರಿ ತುಳು ಸಿನಿಮಾಕ್ಕೆ ಬ್ರಹ್ಮಾವರದಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣಗೊಂಡಿತು. ಪೇತ್ರಿ ಬಳಿ ಇರುವ ಗುತ್ತಿನ ಮನೆಯಲ್ಲಿ ಅಂತಿಮ ಹಂತದ ಚಿತ್ರೀಕರಣದ ಭಾಗವಾಗಿ ಮಾಸ್ ಮಾದ ನಿರ್ದೇಶನದ ಸಾಹಸ ದೃಶ್ಯಗಳನ್ನು ಸಂಯೋಜಿಸಲಾಯಿತು.
ಮುಖ್ಯವಾಗಿ ಸಿನಿಮಾದಲ್ಲಿ ಹಾಸ್ಯ ಮನರಂಜನೆಯ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಈ ಸಿನಿಮಾದ ಮೂಲಕ ರವಾನಿಸ ಲಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ರಾಮ್ ಶೆಟ್ಟಿ ತಿಳಿಸಿದರು.
ಏರೆಗಾವುಯೆ ಕಿರಿಕಿರಿಯ ನಿರ್ಮಾಪಕರು ಕ್ರಿಶ್ಚಿಯನ್ ಸಮುದಾಯದವರು. ಚಿತ್ರದ ನಾಯಕ ಮುಸ್ಲಿಂ ಸಮುದಾಯದವರು ಹೀಗಾಗಿ ಇದೊಂದು ಸೌಹಾರ್ದತೆಯ ಸಿನಿಮಾ ಎಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಕುಸೇಲ್ದರಸೆ ನವೀನ್ ಡಿ ಪಡೀಲ್ ತಿಳಿಸಿದರು. ದೀಪಾವಳಿಯ ಸಮಯದಲ್ಲಿ ಸಿನಿಮಾವನ್ನು ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಸಿನಿಮಾದ ನಿರ್ಮಾಪಕ ರೋಶನ್ ವೇಗಸ್ ತಿಳಿಸಿದರು.
ತಾರಾಗಣದಲ್ಲಿ..
ಕುಸೇಲ್ದರಸೆ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್,ಮಹಮ್ಮದ್ ನಹೀಮ್, ಉದ್ಯಾವರ, ಐಶ್ವರ್ಯ ಹೆಗ್ಡೆ, ರೋಶನ್ ವೇಗಸ್, ಶ್ರದ್ಧಾ ಸಾಲಿಯಾನ್, ಹರೀಶ್ ವಾಸು ಶೆಟ್ಟಿ-ಸಾಯಿಕೃಷ್ಣ ಕುಡ್ಲ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಸುಂದರ ರೈ ಮಂದಾರ, ದಿನೇಶ್ ಕೋಡಪದವು, ಪ್ರದೀಪ್ ಚಂದ್ರ, ಸುನೀಲ್ ನೆಲ್ಲಿಗುಡ್ಡೆ, ರಘು ಪಾಂಡೇಶ್ವರ, ಸರೋಜಿನಿ ಶೆಟ್ಟಿ, ಶೇಖರ್ ಭಂಡಾರಿ, ಶ್ರೀಜಿತ್ ವಸಂತ ಮುನಿಯಾಲ್,- ಪ್ರಿಯಾಮಣಿ, ಪವಿತ್ರ ಶೆಟ್ಟಿ- ಡಿಬಿಸಿ ಶೇಖರ್ , ಕುಮಾರಿ ಕುಶಿ ಚಂದ್ರಶೇಖರ್ ಮೊದಲಾದವರಿದ್ದಾರೆ.
ಛಾಯಾಗ್ರಹಣ:
ರವಿ ಚಂದನ್ ಕುಂದಾಪುರ, ಸಂಗೀತ : ವಿ. ಮನೋಹರ್, ಚಿತ್ರಕತೆ : ಸಚಿನ್ ಶೆಟ್ಟಿ, ಕುಂಬ್ಳೆ, ಸಂಭಾಷಣೆ, ಸಾಹಿತ್ಯ : ಡಿಬಿಸಿ ಶೇಖರ್, ಸಂಕಲನ: ನಾಸಿರ್ ಹಕೀಮ್, ನೃತ್ಯ : ಮದನ್ ಹರಿಣಿ, ಸಾಹಸ: ಮಾಸ್ ಮಾದ, ಕಲಾ ನಿರ್ದೇಶನ : ದೇವಿ ಪ್ರಕಾಶ್, ಮೇಕಪ್ : ಜೆ.ಎನ್. ಅಶೋಕ್, ವಸ್ತ್ರಾಲಂಕಾರ : ರಾಮ್‌ಕುಮಾರ್, ಸ್ಟಿಲ್ : ರಾಮ್‌ಪ್ರಸಾದ್, ನಿರ್ಮಾಣ ನಿರ್ವಹಣೆ -ಶಿವಾರ್ಜುನ್ ದಿನೇಶ್ ಜೋಗಿ, ಕಾರ್ಯಕಾರಿ ನಿರ್ಮಾಪಕರು -ನಿಕ್ಷಿತ್‌ರಾವ್ ನಿಧಿರಾವ್, ನಿರ್ಮಾಣ: ವೇಗಸ್ ಫಿಲಮ್ಸ್, ನಿರ್ಮಾಪಕರು: ರೋಶನ್ ವೇಗಸ್, ಕೆ, ನಿರ್ದೇಶನ: ರಾಮ್ ಶೆಟ್ಟಿ
ಏರೆಗಾವುಯೆ ಕಿರಿಕಿರಿ (ತುಳು ಚಿತ್ರ-ಸಾರಾಂಶ)
ನಾಯಕರಿಬ್ಬರುಯ ಮೃದು ಮನಸ್ಸಿನ ಕಳ್ಳರು. ಒಬ್ಬ ತಾಯಿಯ ಆರೈಕೆಗಾಗಿ ಕಳ್ಳತನ ಮಾಡಿದರೆ ಇನ್ನೊಬ್ಬ ತನ್ನ ಬಾಲ್ಯದ ಕಹಿ ಘಟನೆಯಿಂದ ಕಳ್ಳತನಕ್ಕಿಳಿಯುತ್ತಾನೆ. ಇವರಿಬ್ಬರು ಮಾಡಿದ ತಪ್ಪಲ್ಲಿ ಪ್ರತಿ ಸಲ ಒಬ್ಬ ಅಮಾಯಕ ಬೈಕ್ ಮೆಕ್ಯಾನಿಕ್ ಸಿಕ್ಕಾಕೊಂಡು ಒದ್ದಾಡುತ್ತಿರುತ್ತಾನೆ. ಮೆಕ್ಯಾನಿಕ್‌ಗೆ ಇವರ ಮೇಲೆ ಹಗೆ ಬೆಳೆದು, ಹೇಗಾದರೂ ಮಾಡಿ ಇವರನ್ನ ಪೊಲೀಸರಿಗೆ ಹಿಡಿಸುವುದಕ್ಕಾಗಿ ಇವರ ಹಿಂದೆ ಬಿದ್ದಿರುತ್ತಾನೆ. ಬೇರೆ ಬೇರೆ ಊರಲ್ಲಿ ಬೇರೆ ಬೇರೆಯಾಗಿ ಕಳ್ಳತನ ಸ್ಕೆಚ್ ಹಾಕುತ್ತಾರೆ. ಅಷ್ಟರಲ್ಲಿ ಅವರ ಲೈಪಲ್ಲಿ ಒಬ್ಬಳು ಬೋಲ್ಡ್ ಆಂಡ್ ಬಿಂದಾಸ್ ನಾಯಕಿಯ ಆಗಮನವಾಗುತ್ತದೆ. ಈ ಇಬ್ಬರು ಕಳ್ಳರ ಮಾಡಹೊರಟ ದೊಡ್ಡ ಮಟ್ಟದ ಕಳ್ಳತನದ ಲಾಭವನ್ನು ಒಬ್ಬ ಟೆರರ್ ವಿಲನ್ ಪಡೆದುಕೊಳ್ಳುತ್ತಾನೆ. ನಾಯಕರಿಬ್ಬರು ತಮ್ಮದಲ್ಲದ ತಪ್ಪಿಗೆ ತಮ್ಮ ಮೇಲೆ ಅಪವಾದ ಬಂದಾಗ, ಅದರ ಮೂಲವನ್ನು ಭೇದಿಸಿ, ವಿಲನ್‌ನನ್ನು ಸದೆಬಡಿಯುತ್ತಾರೆ.
Comments are closed.