ಕರಾವಳಿ

ಬಿಜೈ ನ್ಯೂರೋಡ್ ಹಾಗೂ ಆನೆಗುಂಡಿಯಲ್ಲಿ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಕಾಮತ್ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 31 ನೇ ಬಿಜೈ ನ್ಯೂರೋಡ್ನ ಮುಂದುವರಿದ ಭಾಗಕ್ಕೆ ಪ್ರಕೃತಿ ವಿಕೋಪದ ಪರಿಹಾರದ ನಿಧಿಯಡಿಯಲ್ಲಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಕ್ಕೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ 31 ನೇ ಬಿಜೈ ವಾರ್ಡಿನ ಆನೆಗುಂಡಿ 4 ನೇ ಅಡ್ಡರಸ್ತೆಯಿಂದ ರೇವಣ್ಣ ಪೂಜಾರಿ ಮನೆಯ ಹತ್ತಿರ ಅಡ್ಡರಸ್ತೆಗೆ ಪ್ರಕೃತಿ ವಿಕೋಪದ ಪರಿಹಾರದ ಅನುದಾನದಡಿಯಲ್ಲಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಪ್ರಶಾಂತ ಆಳ್ವ, ಕಾತ್ಯಾಯಿನಿ ರಾವ್, ರಮೇಶ್ ಕಂಡೆಟ್ಟು, ಸಂಜಯ ಪ್ರಭು, ಅಜಯ ಕುಡುಪು, ವಸಂತ ಜೆ ಪೂಜಾರಿ, ಚರಿತ ಪೂಜಾರಿ, ಸಂತೋಷ್ ಉಳ್ಳಾಲ್, ಶ್ರೀಕಾಂತ್ ರಾವ್, ದಯಾನಂದ, ಭರತ್, ಹರಿಣಿ ವಿಜೇಂದ್ರ, ಮನೋಜ್, ವಾರ್ಡ್ ಹಿರಿಯರಾದ ನಾಗೇಶ್, ರಮೇಶ್ ರಾವ್, ಚಂದ್ರಶೇಖರ್ ಮಯ್ಯ, ಅಜಯ ಡಿಸಿಲ್ವ, ಪೃಥ್ವಿಶ್ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Comments are closed.